Header Ads
Breaking News

ಕುಂದಾಪುರದ ಕೋಟೇಶ್ವರದಲ್ಲಿ ಭಾರತ್ ಸಿನೆಮಾಸ್ ಶಾಖೆ ಉದ್ಘಾಟನೆ

ಕುಂದಾಪುರ ತಾಲೂಕಿನ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ನಿರ್ಮಾಣಗೊಂಡ ಕೋಸ್ಟಲ್ ಕ್ರೌನ್ ಮಾಲ್ ನಲ್ಲಿ ಭಾರತ್ ಸಿನೆಮಾಸ್ ಶಾಖೆಯನ್ನು ಖ್ಯಾತ ಸಂಗೀತ ನಿರ್ದೇಶಕ ರವಿಬಸ್ರೂರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕುಂದಾಪುರಕ್ಕೊಂದು ಗುಣಮಟ್ಟದ ಚಿತ್ರಮಂದಿರ ಬೇಕೆನ್ನುವ ಜನರ ಕನಸು ಈಡೇರಿದೆ. ಉತ್ತಮ ಸಿನೆಮಾ ಮಾಡಿದಾಗ ಅದರ ಪ್ರದರ್ಶನಕ್ಕೆ ಚಿತ್ರಮಂದಿರದ ಅವಶ್ಯಕತೆಯೂ ಇದ್ದು ಈ ಹಿಂದೆ ಕುಂದಾಪುರದಲ್ಲಿ ಕೊರತೆಯಿತ್ತು. ಭಾರತ್ ಸಿನೆಮಾಸ್ ಶಾಖೆಗಳು ಹಳ್ಳಿಹಳ್ಳಿಯಲ್ಲೂ ನಿರ್ಮಾಣಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತ್ ಗ್ರೂಫ್ ನಿರ್ದೇಶಕರಾದ ಸುಧೀರ್ ಎಂ ಪೈ ದೀಪ ಬೆಳಗಿಸಿ ಮಾತನಾಡಿ, ಭಾರತ್ ಸಿನೆಮಾಸ್ ಅನ್ನು ದಕ್ಷಿಣ ಭಾರತದಲ್ಲಿ ಪ್ರಥಮವಾಗಿ 2006ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಕೋಟೇಶ್ವರದಲ್ಲಿ ನಾಲ್ಕನೇ ಶಾಖೆ ಲೋಕಾರ್ಪಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಭಾರತ್ ಸಿನೆಮಾಸ್ ಆರಂಭಿಸುವ ಚಿಂತನೆಯಿದೆ ಎಂದರು.
ಉದ್ಯಮಿ ಪ್ರಕಾಶ್ ಲೋಬೊ, ಶಿವಾನಂದ ಪೂಜಾರಿ, ಶಾಲೆಟ್ ಲೋಬೋ, ಭಾರತ್ ಸಿನೆಮಾ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *