Header Ads
Header Ads
Header Ads
Breaking News

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕಳ್ಳನ ಕೈಚಳಕ

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮೆಡಿಕಲ್ ವಿಭಾಗಕ್ಕೆ ನುಗ್ಗಿದ ಹೆಲ್ಮೆಟ್ ಧರಿಸಿದ ದುಷ್ಕರ್ಮಿಯೋರ್ವ ಕ್ಯಾಶ್ ಕೌಂಟರ್‌ನಲ್ಲಿದ್ದ ಸಾವಿರಾರು ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಬಿಳಿ ಬಣ್ಣದ ಹೆಲ್ಮೆಟ್ ಧರಿಸಿರುವುದರಿಂದ ಆತನ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಮೆಡಿಕಲ್ ವಿಭಾಗದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೆಲ್ಮೆಟ್ ಧರಿಸಿಕೊಂಡು ಬಂದ ಆತ ಏಕಾಏಕಿ ಆಸ್ಪತ್ರೆಗೆ ನುಗ್ಗಿ ಮೆಡಿಕಲ್ ವಿಭಾಗದ ಒಳಗೆ ಜಿಗಿದನು. ಅದನ್ನು ನೋಡಿದ ಉದ್ಯೋಗಿ ಬೊಬ್ಬೆ ಹಾಕಿಕೊಂಡು ಹಿಂಬದಿಗೆ ಓಡಿ ಹೋದರು.
ಈ ಸಂದರ್ಭ ಆತ ಮೆಡಿಕಲ್ ವಿಭಾಗದ ಕ್ಯಾಶ್ ಕೌಂಟರನ್ನು ತೆರೆದು ಅದರಲ್ಲಿದ್ದ ಹಣ ತೆಗೆದು ಬಂದ ಬೈಕಿನಲ್ಲಿಯೇ ಪರಾರಿಯಾಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಜರ್ಕಿನ್ ಧರಿಸಿದ್ದ ದುಷ್ಕರ್ಮಿಯ ಹೆಗಲಲ್ಲಿ ಬ್ಯಾಗ್ ಕೂಡ ಇರುವುದು ವೀಡಿಯೋದಲ್ಲಿ ಕಂಡುಬಂದಿದೆ. ಆದರೆ ಆತನ ಮುಖ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಈ ಬಗ್ಗೆ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Related posts

Leave a Reply