
ಕುಂದಾಪುರದ ಟಿಟಿ ರಸ್ತೆ ಮತ್ತು ಮೂರು ಕೈ ಅಂಡರ್ಪಾಸ್ ಶೀಘ್ರ ತೆರವುಗೊಳಿಸಬೇಕೆಂದು ಆಗ್ರಹಿಸಿ ಡಿವೈಎಫ್ಐ ನೇತೃತ್ವದಲ್ಲಿ ಬೃಹತ್ ಪಾದಯಾತ್ರಯನ್ನು ಹಮ್ಮಿಕೊಂಡರು. ಬೊಬ್ಬರ್ಯನ ಕಟ್ಟೆ ಬಳಿ ಪಾದಚಾರಿ ಮಾರ್ಗ ನಿರ್ಮಿಸುವಂತೆಯೂ ಒತ್ತಾಯಿಸಿದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ತಾಲೂಕು ಸಮಿತಿ ಹೋರಾಕ್ಕೆ ವಿವಿಧ ಕಾರ್ಮಿಕ ಸಂಘಟನೆ, ರಿಕ್ಷಾ ಯೂನಿಯನ್, ಸಿಐಟಿಯು ಅವರು ಸಾಥ್ ನೀಡಿದರು. ವಿನಯ್ ನರ್ಸಿಂಗ್ ಹೋಮ್ನಿಂದ ಆರಂಭಗೊಂಡ ಪಾದಯಾತ್ರೆಯು ವಿನಾಯಕ ಜಂಕ್ಷನ್ ಸುತ್ತುವರಿದು ಬಳಿಕ ಶಾಸ್ತ್ರೀ ಸರ್ಕಲ್ನಲ್ಲಿ ಧರಣಿ ನಡೆಸಿದರು.