Header Ads
Header Ads
Breaking News

ಕುಂದಾಪುರದ ನೂತನ ಎಎಸ್ಪಿಯಾಗಿ ಹರಿರಾಂ ಶಂಕರ್ ಅಧಿಕಾರ ಸ್ವೀಕಾರ

ಕುಂದಾಪುರ ಉಪವಿಭಾಗದ ನೂತನ ಎಎಸ್ಪಿ ಆಗಿ 2017 ಬ್ಯಾಚಿನ ಐಪಿಎಸ್ ಅಧಿಕಾರಿ ಹರಿರಾಂ ಶಂಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನಗರದ ಪೊಲೀಸ್  ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು. ಕುಂದಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನೂತನ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಉಪವಿಭಾಗ ವ್ಯಾಪ್ತಿಯ ಬಗ್ಗೆ ಮೊದಲು ಅರಿಯಬೇಕು. ಇಲ್ಲಿನ ಅಧಿಕಾರಿಗಳ ಉತ್ತಮ ಕಾರ್ಯವೈಖರಿಯಿಂದಾಗಿ ಎಲ್ಲವೂ ಶಾಂತಿಯುತವಾಗಿದ್ದು ಅದನ್ನು ಮುಂದುವರೆಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು. ಈ ಸಂದರ್ಭ ಕುಂದಾಪುರ ಸಿಪಿಐ ಮಂಜಪ್ಪ, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ವಿವಿಧ ಠಾಣೆ ಪಿಎಸ್‍ಐ ಹಾಗೂ ಸಿಬ್ಬಂದಿಗಳು ಇದ್ದರು.

Related posts

Leave a Reply

Your email address will not be published. Required fields are marked *