Header Ads
Breaking News

ಕುಂದಾಪುರ:ಬುಲೆಟ್ ಕರ್ಕಶ ಶಬ್ದಕ್ಕೆ ಬ್ರೇಕ್ ಹಾಕಿದ ಕುಂದಾಪುರ ಪೊಲೀಸರು!

ಬೆಳ್ಳಂಬೆಳಗ್ಗೆ ಕುಂದಾಪುರ ಪೇಟೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು, ಡಿಫೆಕ್ಟಿವ್ ಸೈಲೆನ್ಸರ್ ಬಳಸಿ ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ ಸವಾರರನ್ನು ಠಾಣೆಗೆ ಕರೆಸಿ ಠಾಣೆಯಲ್ಲೇ ಡಿಫೆಕ್ಟಿವ್ ಸೈಲೆನ್ಸರ್ ಅವರಿಂದಲೇ ತೆರವುಗೊಳಿಸಿ ಕಂಪೆನಿ ನೀಡುವ ಸೈಲೆನ್ಸರನ್ನು ಅಳವಡಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.ಇಂದು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಲ್ಕು ಬುಲೆಟ್‌ಗಳಿಗೆ ದಂಡ ವಿಧಿಸಿದ್ದು, ದಿನಾಲು ಇಂತಹ ಕಾರ್ಯಾಚರಣೆ ಮಾಡುತ್ತೇವೆಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಬುಲೆಟ್ ಕರ್ಕಶ ಶಬ್ದದಿಂದ ಬೇಸತ್ತ ಸ್ಥಳೀಯರು ಪೊಲೀಸರಿಗೆ ಆಗಾಗೆ ಎಚ್ಚರಿಸುತ್ತಲೇ ಇದ್ದುದರಿಂದ ಇಂದು ಕುಂದಾಪುರ ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಠಾಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Related posts

Leave a Reply