Header Ads
Header Ads
Breaking News

ಕುಂದಾಪುರಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕುಂದಾಪುರ: 1973ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ಮೈಸೂರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಆಲೂರು ವೆಂಕಟರಾಯ ಸೇರಿದಂತೆ ಹಲವು ಮಹನೀಯರು ಸಮಗ್ರ ಕರ್ನಾಟಕವನ್ನು ಒಂದುಗೂಡಿಸುವಲ್ಲಿ ಪರಿಶ್ರಮಪಟ್ಟಿದ್ದರು. ಕರ್ನಾಟಕ ಏಕೀಕರಣಕ್ಕೂ ಕೂಡ ದ.ಕ ಜಿಲ್ಲೆಯ ಹಲವರ ಪರಿಶ್ರಮವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಟಿ. ಭೂಬಾಲನ್  ಹೇಳಿದರು

.ಅವರು ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾಪಂ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.ಕುಂದಾಪುರ ತಹಶಿಲ್ದಾರ್ ತಿಪ್ಪೆಸ್ವಾಮಿ, ಡಿವೈಎಸ್ಪಿ ದಿನೇಶ್ ಕುಮಾರ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಪೊಲೀಸ್  ಠಾಣೆ ಉಪನಿರೀಕ್ಷಕ ಹರೀಶ್ ಆರ್. ನಾಯ್ಕ್ ಪಥಸಂಚಲನ ನೇತೃತ್ವ ವಹಿಸಿದ್ದರು. ಗೃಹ ರಕ್ಷಕ ದಳ, ವಿವಿಧ ಶಾಲೆಗಳ ಎನ್‍ಸಿಸಿ, ಸೇವಾದಳ, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಪರೇಡ್ ನಡೆಸಿದರು.

Related posts

Leave a Reply