Header Ads
Breaking News

ಕುಂದಾ”ಪುರಸಭೆ” ವಿಶೇಷ ಸಭೆಗೆ ಕಾಂಗ್ರೆಸ್ ಸದಸ್ಯರ ಬಹಿಷ್ಕಾರ

ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ಬಹಿಷ್ಕಾರದ ನಡುವೆ ಕುಂದಾಪುರ ಪುರಸಭೆಯಲ್ಲಿ ನಡೆದ ಆಸ್ತಿ ತೆರಿಗೆಯ ಕುರಿತಾದ ವಿಶೇಷ ಸಭೆಯಲ್ಲಿ ಸರ್ಕಾರದ ಸುತ್ತೋಲೆಯಂತೆ ಜನರಿಗೆ ಹೊರೆಯಾಗದ ರೀತಿಯಲ್ಲಿ 2021-22ನೇ ಸಾಲಿಗೆ ತೆರಿಗೆ ದರವನ್ನು ಸರ್ಕಾರಿ ಮಾರುಕಟ್ಟೆ ದರದಂತೆ ಪರಿಷ್ಕರಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.ಸರ್ಕಾರದ ಸುತ್ತೋಲೆ, ಪುರಸಭೆ ಕೈಗೊಳ್ಳಬಹುದಾದ ನಿರ್ಧಾರಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಸುತ್ತೋಲೆಯನ್ನು ನಿರ್ಲಕ್ಷ್ಯ ಮಾಡಿದರೇ ಅನುದಾನಗಳಿಗೆ ತೊಡಕಾಗುವ ಕುರಿತು ತಿಳಿಸಿದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ಮುಖಂಡ ಚಂದ್ರಶೇಖರ ಖಾರ್ವಿ, ಆಸ್ತಿ ತೆರಿಗೆ ಏರಿಸದಂತೆ ಹಾಗೂ 2005-06 ರ ದರದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಮನವಿ ನೀಡಿದ್ದೇವೆ. ಚರ್ಚೆಗೆ ಅವಕಾಶವಿಲ್ಲದ ಈ ಸಭೆಯಿಂದ ದೂರ ಉಳಿದಿದ್ದೇವೆ. ನಾವು ಯಾವತ್ತೂ ಪಲಾಯನವಾದ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಜನರ ಪರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಮುಂದೆಯೂ ಜನಪರವಾದ ಹೋರಾಟಕ್ಕೆ ತಯಾರಿದ್ದೇವೆ ಎಂದರು. ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *