Header Ads
Header Ads
Breaking News

ಕುಂದಾಪುರ : ಅಪರಿಚಿತ ವಾಹನ-ಬೈಕ್ ಅಪಘಾತ

ಕುಂದಾಪುರದ ಅರಾಟೆ ಸೇತುವೆ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕ ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದೆ.ಕುಂದಾಪುರ ತಾಲೂಕಿನ ಆರಾಟೆ ಸೇತುವೆ ಮೇಲೆ ಅಪಘಾತ ಸಂಭವಿಸಿದ್ದು ಅಪಘಾತ ತೀವ್ರತೆಗೆ ಬೈಕ್ ಸವಾರನ ದೇಹ ನಜ್ಜು ಛಿದ್ರವಾಗಿದೆ. ಇನ್ನು ಡಿಕ್ಕಿ ಹೊಡೆದ ವಾಹನ ಸ್ಥಳದಿಂದ ಸುಮಾರು 2 ಕಿಲೋಮೀಟರ್ ದೂರದ ಹೆಮ್ಮಾಡಿ ತನಕ ಬೈಕ್ ಎಳೆದೊಯ್ದಿದೆ. ಢಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದ್ದು ಪೊಲೀಸ್ರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಗಂಗೊಳ್ಳಿ 2್ಠ47 ಹೆಲ್ಪ್ ಲೈನ್ ಸ್ವಯಂಸೇವಕರು ಪೊಲೀಸ್ರುಸಿಬ್ಬಂದಿಗಳ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರು.

ಮೃತ ಯುವಕ ಕುಂದಾಪುರದ ಹೊಟೇಲವೊಂದರಲ್ಲಿ ಕೆಲಸಕ್ಕಿದ್ದು, ತಡರಾತ್ರಿ 12.30 ಸುಮಾರಿಗೆ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದು ತಾಸಿನ ಬಳಿಕ ಘಟನೆ ಬೆಳಕಿಗೆ ಬಂದಿದೆ.

Related posts

Leave a Reply

Your email address will not be published. Required fields are marked *