Header Ads
Header Ads
Breaking News

ಕುಂದಾಪುರ: ಆರ್‌ಟಿಓ ತೆರೆಯುವಂತೆ ಲಾರಿ ಮಾಲಕರ ಸಂಘದಿಂದ ಸಚಿವರಿಗೆ ಮನವಿ

ಕುಂದಾಪುರ ಜನರ ಬಹುವರ್ಷಗಳ ಬೇಡಿಕೆಯಾದಂತಹ ಆರ್‌ಟಿಓ ಕಚೇರಿ ಕುರಿತು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರಲ್ಲಿ ಜಿಲ್ಲಾ ಲಾರಿ ಮಾಲಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕುಂದಾಪುರ ಡಿಪೋ ಪರಿಶೀಲನೆಗೆ ಆಗಮಿಸಿದ ಸಚಿವ ಡಿಸಿ ತಮ್ಮಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಇಡೀ ಜಿಲ್ಲೆಯಲ್ಲೇ ದೊಡ್ಡ ತಾಲೂಕಾಗಿರುವ ಕುಂದಾಪುರಕ್ಕೆ ಆರ್‌ಟಿಓ ಕಚೇರಿ ಅಗತ್ಯವಿದೆ. ಹೆಚ್ಚಿನ ಪ್ರಮಾಣದಲ್ಲಿ ಬಸ್ಸು, ಲಾರಿ, ಕಾರುಗಳು ಇರುವುದರಿಂದ ಕುಂದಾಪುರದಲ್ಲಿ ಅಧಿಕೃತವಾಗಿ ಆರ್‌ಟಿಓ ಕಚೇರಿಯನ್ನು ತೆರೆದರೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ.

ಬೈಂದೂರು ತಾಲೂಕಿನ ಶಿರೂರಿನಿಂದ ಹಿಡಿದು ಕುಂದಾಪುರ ಮಡಾಮಕ್ಕಿಯವರೆಗಿನ ಜನರು ಸುಮಾರು ೧೦೦ಕ್ಕೂ ಅಧಿಕ ಕಿಮೀ ಸಂಚರಿಸಿ ದೂರದ ಮಣಿಪಾಲದಲ್ಲಿರುವ ಕಚೇರಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ ಕುಂದಾಪುರದಲ್ಲಿ ಶಾಶ್ವತ ಸಾರಿಗೆ ಕಚೇರಿ ತೆರೆಯುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಆರ್‌ಟಿಓ ಇಲಾಖೆಗಳಲ್ಲಿ ಹುದ್ದೆಗಳ ಕೊರತೆ ಇದೆ. ಕೆಲವೊಂದು ತೊಡಕುಗಳಿಂದ ಹುದ್ದೆ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೂಡಲೇ ಕುಂದಾಪುರದಲ್ಲಿ ಆರ್‌ಟಿಓ ಕಚೇರಿ ಆರಂಭಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನ ನಡೆಸುತ್ತೇನೆ ಎಂದರು.

ಲಾರಿ ಮಾಲಕರ ಸಂಘದ ತಾಲೂಕು ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ರವಿರಾಜ್ ವಂಡ್ಸೆ, ಖಜಾಂಚಿ ಅನಿಲ್ ಡಿಎಸ್ ಮೊದಲಾದವರು ಇದ್ದರು.

Related posts

Leave a Reply