Header Ads
Breaking News

ಕುಂದಾಪುರ ಕಂದಾಯ ನಿರೀಕ್ಷಕನ ಮೇಲೆ ಎಸಿಬಿ ದಾಳಿ

ಕುಂದಾಪುರ: ಕುಂದಾಪುರದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ರಾಜಸ್ವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿರುವ ಉಡುಪಿ ಭೃಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವ್ಯಕ್ತಿಯೊಬ್ಬರಿಂದ 5,೦೦೦ ರೂ. ಸ್ವೀಕರಿಸುತ್ತಿದ್ದ ಪ್ರಭಾರ ಕಂದಾಯ ನಿರೀಕ್ಷಕ ಭರತ್ ಶೆಟ್ಟಿಯವರನ್ನು ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.ಭೂ ಪರಿವರ್ತನೆಗಾಗಿ ವ್ಯಕ್ತಿಯೊಬ್ಬರಿಂದ 12,೦೦೦ ರೂ. ಬೇಡಿಕೆ ಇಟ್ಟಿದ್ದ ಭರತ್ ಶೆಟ್ಟಿ, ಇದರ ಅರ್ಧದಷ್ಟು ಹಣ 5,೦೦೦ ಪಡೆಯುವ ವೇಳೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ ಸತೀಶಕುಮಾರ, ಚಂದ್ರಕಲಾ, ಸಿಬ್ಬಂದಿಗಳಾದ ಪ್ರಸನ್ನ, ರವೀಂದ್ರ, ಅಬ್ದುಲ್ ಜಲಾಲ್, ರಾಘವೇಂದ್ರ ಹೋಸ್ಕೋಟೆ, ಸೂರಜ್, ಅಬ್ದುಲ್ ಲತೀಫ್ ಹಾಗೂ ಪ್ರತಿಮಾ ಇದ್ದರು.
ವರದಿ: ಶ್ರೀಕಾಂತ್ ಕುಂದಾಪುರ

 

Related posts

Leave a Reply

Your email address will not be published. Required fields are marked *