Header Ads
Header Ads
Breaking News

ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ಆರಂಭವಾಗಿ150 ದಿನ

ಸರ್ಕಾರಿ ಬಸ್ ಸೇವೆಯನ್ನು ಉಳಿಸಿಕೊಳ್ಳುವುದು ಆಯಾಯ ಗ್ರಾಮಗಳ ಜನರಿಗೆ ಜವಾಬ್ದಾರಿಯಾಗಿರುತ್ತದೆ. ಕಾವ್ರಾಡಿ ಗ್ರಾಮಕ್ಕೆ ಸರ್ಕಾರಿ ಬಸ್ ಬೇಕೆಂಬ ನಾಗರಿಕರ ಹೋರಾಟದಿಂದ ಬಸ್ ವ್ಯವಸ್ಥೆ ಆಗಿದೆ. ಉತ್ತಮ ಪ್ರೋತ್ಸಾಹವೂ ಸಿಗುತ್ತಿದೆ. ಅದೇ ರೀತಿ ಎಲ್ಲ ಭಾಗಗಳಲ್ಲಿಯೂ ಇಂಥಹ ಸಹಕಾರ ಸಿಕ್ಕರೆ ಕೆಎಸ್‌ಆರ್‌ಟಿಸಿ ಇನ್ನಷ್ಟು ಬಸ್ ಓಡಿಸಲು ಉತ್ತೇಜನ ಸಿಗುತ್ತದೆ. ಸರ್ಕಾರಿ ಬಸ್‌ಗಳಲ್ಲಿ ಇರುವ ಸೌಲಭ್ಯವನ್ನು ನಾಗರಿಕರು ಪಡೆದುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಕುಂದಾಪುರ ಘಟಕದ ವ್ಯವಸ್ಥಾಪಕ ಸತ್ಯಂ ಸುಂದರಂ ಹೇಳಿದರು

.ಕುಂದಾಪುರ-ಕಾವ್ರಾಡಿ, ವಾಲ್ತೂರು-ಕೊಲ್ಲೂರು ಮಾರ್ಗವಾಗಿ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ150ನೇ ದಿನದ ಪ್ರಯುಕ್ತ ಸಮಾಜ ಸೇವಕ ದಿನಕರ ಶೆಟ್ಟಿ ಮುಂಬಾರು ನೇತೃತ್ವದಲ್ಲಿ ಕುಂದಾಪುರದಲ್ಲಿ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಉದ್ಯಮಿ ಸದಾನಂದ ಕಿಣಿ ಅಂಪಾರು, ಉದ್ಯಮಿ ಜಾಪರ್ ಸಾಹೇಬ್ ಕಾವ್ರಾಡಿ, ಗ್ರೀನ್ ಲ್ಯಾಂಡ್ ಎಸ್ಟೆಟ್‌ನ ಡೇವಿಡ್ ಕಾವ್ರಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply