Header Ads
Header Ads
Breaking News

ಕುಂದಾಪುರ: ಡಬಲ್ ಮರ್ಡರ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಕುಂದಾಪುರ: ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಧಿಸಿದಂತೆ ಎಲ್ಲಾ ಬಂಧಿತ ಹದಿನಾರು ಮಂದಿ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ಆರೋಪಿಗಳಿಗೆ ಮಾ.1ರ ತನಕ ನ್ಯಾಯಾಂಗ ಬಂಧನ ಹಾಗೂ ಇಬ್ಬರಿಗೆ ಫೆ.20ರ ತನಕ ಪೊಲೀಸ್ ಕಸ್ಟಿಡಿಗೆ ಒಪ್ಪಿಸಲಾಗಿದೆ. ಕೊಲೆ ನಡೆದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪೊಲೀಸರು ವಿವಿಧ ಕಡೆಗಳಲ್ಲಿ ಬಂಧಿಸಿದ್ದರು. ಕೊಲೆಯಲ್ಲಿ ಭಾಗಿ ಹಾಗೂ ಸಾಕ್ಷಿನಾಶ ಮತ್ತು ಕೊಲೆಗಾರರಿಗೆ ಸಹಕಾರ ಮಾಡಿದ ಆರೋಪದಡಿ ಒಟ್ಟು 16 ಮಂದಿಯನ್ನು ಬಂಧಿಸಿದ್ದು, ಎಲ್ಲರನ್ನು ಕುಂದಾಪುರ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಧೀಶ ಶ್ರೀಕಾಂತ್ ಅವರ ಮುಂದೆ ಹಾಜರುಪಡಿಸಲಾಗಿದೆ.

ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೀಶ್ ಕರ್ಕೇರಾ, ಶಂಕರ ಮೊಗವೀರ, ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಮಹೇಶ್ ಗಾಣಿಗ, ರವಿಚಂದ್ರ ಹಾಗೂ ರವೀಂದ್ರ ಎಂಬವರಿಗೆ ಮಾ.1 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ತನಿಖಾಧಿಕಾರಿ ಜಯಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

Related posts

Leave a Reply

Your email address will not be published. Required fields are marked *