Header Ads
Header Ads
Header Ads
Breaking News

ಕುಂದಾಪುರ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಜಗತ್ತಲ್ಲಿದ್ದರೆ ಅದು ಪತ್ರಿಕೆ ಮಾತ್ರ. ಓದುಗನ ಋಣದಲ್ಲಿ ಮಾಧ್ಯಮಗಳು ಇರುವುದಿಲ್ಲ. ಓದುಗ ಕೊಡುವ ಹಣದಿಂದ ಪತ್ರಿಕೆಯೂ ನಡೆಯುತ್ತಿಲ್ಲ. ಎಂದು ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಕಳವಳ ವ್ಯಕ್ತಪಡಿಸಿದರು.

ಅವರು ಮಂಗಳವಾರ ಸಂಜೆ ಕುಂದಾಪುರದ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪತ್ರಿಕೆ ನಡೆಸುವವರಿಗೂ ಓದುಗರಿಗೂ ಸಂಬಂಧವಿದೆ. ಆದರೆ ಚಾನೆಲ್ ನಡೆಸುವವರಿಗೂ ವೀಕ್ಷಕರಿಗೂ ಸಂಬಂಧವಿರುವುದಿಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಇದೇ ರೀತಿ ಕವಲು ದಾರಿಯಲ್ಲಿರುತ್ತದೆ, ದಿಕ್ಕೆಟ್ಟು ಕೂತಿರುತ್ತದೆ ಎಂದ್ರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಙಾವಿಧಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಬೋಧಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು. ಎಎಸ್‌ಪಿ ಹರಿರಾಮ್ ಶಂಕರ್ ಪತ್ರಕರ್ತರಿಗೆ ಸಂಘದ ಗುರುತಿನ ಚೀಟಿಯನ್ನು ವಿತರಿಸಿದರು.

ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆಸಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *