Header Ads
Header Ads
Breaking News

ಕುಂದಾಪುರ ತಾ.ಪಂ. ಸಭೆ ಕೇಸ್ ವರ್ಕರ್ ಮೂಲಕ ಪ್ರಶ್ನೆ ಕೇಳಿದ್ದ ಕಿರಣ್ ಪೂಜಾರಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

 

ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಸಭೆ ತಾ.ಪಂ ಅಧ್ಯಕ್ಷೆ ಜಯಶ್ರೀ ಮೋಗವೀರ ಅದ್ಯಕ್ಷತೆಯಲ್ಲಿ ನಡೆಯಿತು. ಆರಂಭದಲ್ಲಿ ಸದಸ್ಯ ಕರಣ್ ಪೂಜಾರಿ ತಲ್ಲೂರು ತಾ.ಪಂ ವ್ಯಾಪ್ತಿಯ ಸಮಸ್ಯೆಯ ಪ್ರಶ್ನೆಯನ್ನು ಅಧ್ಯಕ್ಷರಿಗೆ ಕೆಸ್ ವರ್ಕರ್ ಮೂಲಕ ನೀಡಿದ್ದು, ಇದನ್ನು ಅದ್ಯಕ್ಷರು ತಿರಸ್ಕರಿಸಿದ್ದರು. ಈ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದಾಗ ಅದ್ಯಕ್ಷರು ನೇರವಾಗಿ ನನ್ನ ಕೈಯಲ್ಲಿ ನೀಡಬೇಕಿತ್ತು ಎಂಬ ಉತ್ತರ ನೀಡಿದರು. ಇದರಿಂದ ಆಕ್ರೋಶಿತರಾದ ಸದಸ್ಯರು, ಪ್ರಶ್ನೆಯನ್ನು ಯಾವೂದೆ ರೀತಿಯಲ್ಲಿ ಪ್ರಶ್ನೆಯನ್ನು ಕೇಳಬಹುದು.

ನೀವು ಮನೆಯಲ್ಲಿದ್ದಾಗ ನಾವು ಅಲ್ಲಿಗೆ ಬಂದು ಪ್ರಶ್ನೆಯನ್ಬುಕೇಳಲಾಗುವುದಿಲ್ಲ ಎಂದರು. ಇದಕ್ಕೆ ಇತರ ಸದಸ್ಯರು ಕೂಡ ಸಹಮತ ವ್ಯಕ್ತಪಡಿಸಿದರು. ಈ ಸಂದರ್ಬ ಅಧ್ಯಕ್ಷೆ ಮಾತನಾಡಿ ಈಗ ಪಾಲನಾ ವರದಿ ಮೇಲೆ ಚರ್ಚೆ ನಡೆಯುತ್ತಿದೆ. ಈಗ ಈ ವಿಚಾರದ ಮೇಲೆ ಚರ್ಚೆ ಅಸಂಬದ್ದ. ಪ್ರಶ್ನೋತ್ತರ ವೇಳೆ ಈ ಬಗ್ಗೆ ಚರ್ಚೆ ನಡೆಸೋಣ ಎಂದರು. ಅದ್ಯಕ್ಷರ ಈ ಮಾತಿನಿಂದ ಆಕ್ರೋಶಿತರಾದ ಸದಸ್ಯ ಕರಣ್ ಪೂಜಾರಿ ಸಾರ್ವಜನಿಕರ ಸಮಸ್ಯೆಯನ್ನು ತಿರಸ್ಕರಿಸಿದ್ದಲ್ಲದೆ. ಯಾಕೆ ತಿರಸ್ಕರಿಸಿದ್ದಿರಿ ಎನ್ಬುವುದನ್ಬ ಪ್ರಶ್ನಿಸಿದರೆ ಅದಕ್ಜೆ ಇದು ಸಮಯವಲ್ಕ ಎನ್ನುತ್ತಿರಿ. ಸಾರ್ವಜನಿಕರ ಸಮಸ್ಯೆಗೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.

Related posts

Leave a Reply