Header Ads
Header Ads
Breaking News

ಕುಂದಾಪುರ ತಾ. ಪಂ. ಸಾಮಾನ್ಯ ಸಭೆ, ಸಮಸ್ಯೆ ಬಿಟ್ಟು ಮೊಬೈಲ್‌ನಲ್ಲಿ ಕಾಲಹರಣ


ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮೊಬೈಲ್ ಹಾವಳಿ ಅತಿಯಾಗಿದೆ, ಜನರ ಸಮಸ್ಯೆ ಬಗ್ಗೆ ಮಾತನಾಡಬೇಕಾದವರು ಸಭೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಸಮಯ ಹಾಳು ಮಾಡುತ್ತಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಸದಸ್ಯರೋರ್ವರು ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದು ಕಂಡು ಬಂತು, ಮೊಬೈಲ್‌ನಲ್ಲಿ ವಾಟ್ಸಪ್ ಜೋಕ್‌ಗಳನ್ನು ಕಂಡು ನಗೆಯಾಡುವುದು, ಇನ್ನೊಬ್ಬರಿಗೆ ತೋರಿಸುವುದು, ಇದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಹೊರತಾಗಿಲ್ಲ. ಒಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಸದಸ್ಯರು ಮೊಬೈಲ್‌ನಲ್ಲಿ ಮುಳುಗಿರುವುದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ. ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಗೆ ಒಂದು ಮರ್ಯಾದೆ ಇಲ್ಲವೆ? ನಿನ್ನೆ ನಡೆದ ಸಭೆಯಲ್ಲಿ ಉಪಾಧ್ಯಕ್ಷರೆ ಕೆಲವರಿಗೆ ಮೊಬೈಲ್‌ನಲ್ಲಿ ಮುಳುಗಿರುವಿರಿ ಎಂದು ಸದಸ್ಯರಿಗೆ ಹೇಳಿರುವುದು ಕಂಡು ಬಂದಿದೆ. ತುರ್ತು ಮಾತುಕತೆ ಇದ್ದಲ್ಲಿ ಮೊಬೈಲ್ ಬಳಕೆ ಸರಿ. ಆದರೆ ಸಬೆಗೆ ಬಂದು ಮೊಬೈಲ್‌ನಲ್ಲಿ ಮುಳುಗಿರುವುದು ಎಷ್ಟು ಸಮಂಜಸ ಎಂದು ಜನ ಮಾಧ್ಯಮ ವಲಯದಲ್ಲಿ ಪ್ರಶ್ನೆ ಮೂಡಿದೆ.

Related posts

Leave a Reply