Header Ads
Header Ads
Breaking News

ಕುಂದಾಪುರ: ದೇಶದೊಳಗೆ ನಾವೇ ಸೈನಿಕರು ಎಂಬ ಬಗ್ಗೆ ಸಭೆ

ಕುಂದಾಪುರ: ದೇಶದ ಸೈನಿಕರು ಶತ್ರು ರಾಷ್ಟ್ರದ ಮೇಲೆ ದಾಳಿ ನಡೆಸಿದಾಗ ಸಾಕ್ಷಿ ಕೇಳುವ ದೇಶದೊಳಗಿರುವ ದೇಶದ್ರೋಹಿಗಳನ್ನು ನೋಡಿ ಇಂದು ಇಡೀ ಪ್ರಪಂಚವೇ ನಗುತ್ತಿದೆ. ನಮ್ಮ ಸೈನಿಕರ ಕೆಚ್ಚೆದೆಯನ್ನು ಇವರೆಲ್ಲಾ ಒಪ್ಪುತ್ತಿಲ್ಲ ಎಂದಾದರೆ ಇಂತಹ ದೇಶದ್ರೋಹಿಗಳಿಗೆ ನಾವೇ ಸೈನಿಕರಾಗಿ ನಮ್ಮ ಸೈನಿಕರನ್ನು ಬೆಂಬಲಿಸೋಣ ಎಂದು ಉದ್ಯಮಿ ಪ್ರೇಮಾನಂದ ಶೆಟ್ಟಿ ಹೇಳಿದರು.

ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಚಕ್ರವರ್ತಿ ಸೂಲಿಬೆಲೆ ಭಾಷಣ ವಿರೋಧಿಸಿ ಕಾಲೇಜು ಪ್ರಾಂಶುಪಾಲರನ್ನು ತೇಜೋವಧೆಗೆ ಯತ್ನಿಸಿದ ವಿವಿಧ ಸಂಘಟನೆಗಳ ಕ್ರಮವನ್ನು ವಿರೋಧಿಸಿ ಇಲ್ಲಿನ ಅಕ್ಷತಾ ಸಭಾಂಗಣದಲ್ಲಿ ನಡೆದ ದೇಶದೊಳಗೆ ನಾವೇ ಸೈನಿಕರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಂಕರ ಅಂಕದಕಟ್ಟೆ ಮಾತನಾಡಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದೇಶದ ಬಗ್ಗೆ, ಸೈನ್ಯದ ಅಂಕಣ ಬರೆಯುವಾಗ ರಾಜಕೀಯವನ್ನು ಎಳೆದು ತರುವುದಿಲ್ಲ. ದೇಶಕ್ಕಾಗಿ ಮಡಿದವರಿಗಾಗಿ ದಿನನಿತ್ಯ ಪತ್ರಿಕೆಯಲ್ಲಿ ಬರೆಯುತ್ತಿರುವ ಚಕ್ರವರ್ತಿ ಸೂಲಿಬೆಲೆಯವರನ್ನು ತುಳಿಯೋದಕ್ಕೆ ಇವತ್ತು ಇಂತಹ ಪ್ರಗತಿಪರ ಚಿಂತಕರು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸತೀಶ್ ಪೂಜಾರಿ, ಕಿರಣ್ ಕುಂದಾಪುರ, ಪುರಸಭಾ ಸದಸ್ಯ ಪ್ರಭಾಕರ, ರಾಷ್ಟ್ರೀಯ ಸೇವಿಕ ಸಮಿತಿಯ ಪ್ರೇಮಾ ಪಡಿಯಾರ್, ವಿನೋದ್ ಪೂಜಾರಿ ಹಾಜರಿದ್ದರು.

Related posts

Leave a Reply

Your email address will not be published. Required fields are marked *