Header Ads
Header Ads
Breaking News

ಕುಂದಾಪುರ : ನ.16ರಂದು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಬೃಹತ್ ಸಾರ್ವಜನಿಕ ಸಭೆ

ಕುಂದಾಪುರದ ಪುರಸಭಾ ವ್ಯಾಪ್ತಿಯ ವಿನಾಯಕ ನಿಲ್ದಾಣದಿಂದ ಸಂಗಮ್‍ವರೆಗಿನ ಚತುಷ್ಪತ ಹೆದ್ದಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 16ರ ಸಂಜೆ 4.30ಕ್ಕೆ ಕುಂದಾಪುರದ ಕಲಾಮಂದಿರದಲ್ಲಿ ಮುಂದಿನ ಹೋರಾಟದ ರೂಪುರೇಶೆಯ ಕುರಿತು ಸಾರ್ವಜನಿಕ ಸಭೆ ನಡೆಸಲಿದ್ದೇವೆ ಎಂದು ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಹೇಳಿದರು.

ಅವರು ಬುಧವಾರ ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕುರಿತು ನಿರಂತರ ಹೋರಟ ನಡೆಸುತ್ತಾ ಬಂದಿದ್ದರೂ ಇದುವರೆಗೆ ನಮಗೆ ಹೆದ್ದಾರಿಯ ಕಾಮಗಾರಿಯ ಚಿತ್ರಣ ಕೊಡುತ್ತಿಲ್ಲ. ಈ ಹಿಂದೆ ಕುಂದಾಪುರ ತಾಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ಕುರಿತು ಸಭೆ ನಡೆಸಿ ಜನಾಭಿಪ್ರಾಯ ಪಡೆದು ಅದನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದೇವೆ. ಜನರ ಭಾವನೆಗಳಿಗೆ ಪ್ರಾಧಿಕಾರ ಸ್ಪಂದಿಸುತ್ತಿಲ್ಲ. ಸರ್ವೀಸ್ ರಸ್ತೆ ಎಂಬ್ಯಾಕ್‍ಮೆಂಟ್, ಫ್ಲೈ ಓವರ್ ಯಾವುದರ ಬಗ್ಗೆಯೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಂಸದರು, ಶಾಸಕರು ಅಧಿಕಾರಿಗಳ ಸಭೆ ಕರೆದಾಗ ಉತ್ತನ ಅಧಿಕಾರಿಗಳು ಸಭೆ ಬಾರದೆ ಇಂಜಿನಿಯರ್‍ಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫ್ಲೈಓವರ್ ಹಾಗೂ ಬಸ್ರೂರು ಮೂರುಕೈ ಬಳಿಯ ಎಂಬ್ಯಾಕ್‍ಮೆಂಟ್ ಕುಂದಾಪುರವನ್ನೇ ಇಬ್ಬಾಗ ಮಾಡಿದೆ. ಎಲ್ಲಿ ಯೂಟರ್ನ್, ಪಾದಾಚರಿಗಳ ಸಂಚಾರ ಹೇಗೆ ಎನ್ನೋದು ಗೊಂದಲದ ಗೂಡಾಗಿದೆ. ಅವೈಜ್ಞಾನಿಕ ಫ್ಲೈ ಓವರ್ ನಿರ್ಮಾಣದಿಂದ ಸಂಚಾರ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂದು ಆರೋಪಿಸಿದರು.

ಕುಂದಾಪುರ ಶಾಸ್ತ್ರಿ ವೃತ್ತದಿಂದ ಮುಂದೆ ಸಿಗುವ ಸಾರಿಗೆ ಬಸ್‍ಗಳು ಬಸ್ ಸ್ಟ್ಯಾಂಡ್ ಪ್ರವೇಶಸಲು ಸಮಸ್ಯೆ ಆಗಲಿದ್ದು, ಸಂಗಮ್ ಪರಿಸರದಿಂದ ಪೇಟೆ ಪ್ರವೇಶದ ಬಗ್ಗೆ ನಿಖರತೆಯಿಲ್ಲ. ಸರ್ವೀಸ್ ರಸ್ತೆ ಕೂಡಾ ಅಯೋಮಯವಾಗಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ ಸಭೆ ನಡೆಯಲಿದ್ದು, ಮುಂದೆ ಯಾವ ರೀತಿ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *