Header Ads
Header Ads
Breaking News

ಕುಂದಾಪುರ: ಮಾದಕ ವ್ಯಸನ ವಿರೋಧಿ ಮಾಸಾಚರಣೆ ಅಭಿಯಾನ

ಕುಂದಾಪುರ: ಯುವಕರರು ನಮ್ಮ ದೇಶದ ಆಸ್ತಿ. ಆದರೆ ಇಂದು ಯುವಕರೇ ಹೆಚ್ಚು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಂತ. ಪಾಠ ಚಟುವಟಿಕೆಗಳ ಬಗ್ಗೆ ಮಾತ್ರವೇ ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸದೇ ಅವರ ಚಲನವಲನಗಳ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಬೇಕು ಎಂದು ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹೇಳಿದರು.ಉಡುಪಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್, ಕುಂದಾಪುರ ಪೊಲೀಸ್ ಉಪವಿಭಾಗ, ಬೈಂದೂರು ವೃತ್ತ ಕಚೇರಿ, ಬೈಂದೂರು ಪೊಲೀಸ್ ಠಾಣೆ ಇವರ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಅಭಿಯಾನದ ಅಂಗವಾಗಿ ಬೈಂದೂರಿನಿಂದ ನಾವುಂದದವರೆಗೆ ನಡೆದ ಸೈಕಲ್ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಉಡುಪಿ ವಿದ್ಯೆ ಹಾಗೂ ಶುಚಿತ್ವದಲ್ಲಿ ಮೊದಲ ಸ್ಥಾನ ಪಡೆದಿದೆ. ಬುದ್ದಿವಂತರ ಜಿಲ್ಲೆಯಲ್ಲಿ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಒಗ್ಗೂಡಿ ಶ್ರಮವಹಿಸಬೇಕಿದೆ. ಮಾದಕ ವ್ಯಸನದ ಸಮಸ್ಯೆ ಕುರಿತು ಅರಿವು ನೀಡುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು.ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾತನಾಡಿ, ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶ ನಮ್ಮದಾಗಿದ್ದು ಒತ್ತಡದಲ್ಲಿರುವ ಯುವಜನಾಂಗ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಉಪಯೋಗ ತಡೆಯುವಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕುಈ ಸಂದರ್ಭ ಜಿಲ್ಲಾಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಬೈಂದೂರು ಸಿಪಿಐ ಪರಮೇಶ್ವರ ಗುನಗ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ಧನ ಮರವಂತೆ, ನಾವುಂದ ಸದ್ಗುರು ಹೋಟೇಲ್ ಮಾಲಿಕ ದೇವರಾಜ್ ಭಟ್, ನೂರಿ ಫಿಶ್ ನಾಗೂರು ಮಾಲಿಕ ಅಬ್ದುಲ್ ರೆಹಮಾನ್, ಬೈಂದೂರು ರೋಟರಿ ಕ್ಲಬ್ ನ ಐ. ನಾರಾಯಣ, ಕ್ರಷ್ಣಪ್ಪ ಶೆಟ್ಟಿ, ಉದ್ಯಮಿ ನಾಗರಾಜ ಗಾಣಿಗ, ಜೆಸಿರೆಟ್ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ನಾವುಂದ ಸಮ್ಮಿಲನ ಶಾಮಿಯಾನ ಮಾಲಿಕ ಕರುಣಾಕರ ಶೆಟ್ಟಿ, ಗಂಗೊಳ್ಳಿ ಪಿಎಸ್‌ಐ ವಾಸಪ್ಪ ನಾಯ್ಕ್, ಕೊಲ್ಲೂರು ಠಾಣೆ ಪಿಎಸ್‌ಐ ಶಿವಕುಮಾರ್ ಹಾಗೂ ವಿವಿಧ ಠಾಣೆ ಸಿಬ್ಬಂದಿಗಳು ಇದ್ದರು.

Related posts

Leave a Reply