Header Ads
Header Ads
Header Ads
Breaking News

ಕುಂದಾಪುರ, ವಿಟ್ಲದಲ್ಲಿ ಸಾರ್ವಜನಿಕ ಶಾರದೋತ್ಸವ ಆಚರಣೆ ಗಮನಸೆಳೆದ ವಿವಿಧ ಬಗೆಯ ಟ್ಯಾಬ್ಲೋಗಳು

ಕುಂದಾಪುರದ ಬೇಳೂರು ಗುಳ್ಳಾಡಿಯ 6 ನೇ ವರ್ಷದ ಸಾರ್ವಜನಿಕ ಶಾರದೋತ್ಸವ ಸಮಿತಿಯ ಶಾರದಾ ವಿಗ್ರಹದ ವಿರ್ಸಜನೆ ವಿಜೃಂಭಣೆಯಿಂದ ಜರುಗಿತು. ರಂಗಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂಧರ್ಭ ಗೌರವಾಧ್ಯಕ್ಷ ಸೀತಾರಾಮ ಗುಳ್ವಾಡಿ, ಅಧ್ಯಕ್ಷ ಮಹೇಶ್ ಮೊದಲಾದವರು ಇದ್ದರು. ನಂತರ ಮೆರವಣಿಗೆ ಮೂಲಕ ಶಾರದಾ ವಿಗ್ರಹವನ್ನ ಬೇಳೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿರ್ಸಜಿಸಲಾಯಿತು.

ಇನ್ನೂ ವಿಟ್ಲದ ದೇವತಾ ಸಮಿತಿ ವತಿಯಿಂದ 46 ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಬೃಹತ್ ಶೋಭಾಯಾತ್ರೆ ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸಮಾಪನಗೊಂಡಿತು. ಬೃಹತ್ ಶೋಭಾಯಾತ್ರೆಯೂ ಬೊಬ್ಬೆಕೇರಿ, ವಿಟ್ಲ ನಾಲ್ಕು ಮಾರ್ಗ ಜಂಕ್ಷನ್, ಹಳೆ ಬಸ್ ನಿಲ್ದಾಣ, ಮೇಗಿನಪೇಟೆ, ಅರಮನೆಯಲ್ಲಿ ರಸ್ತೆಯಲ್ಲಿ ಸಂಚರಿಸಿದೆ. ಶೋಭಾಯಾತ್ರೆಯಲ್ಲಿ ಕೇರಳದ ಚೆಂಡೆ ನರ್ತನ ಎಲ್ಲರ ಗಮನ ಸೆಳೆಯಿತು.

Related posts

Leave a Reply