Header Ads
Header Ads
Breaking News

ಕುಂದಾಪುರ: ವಿಶಿಷ್ಟವಾಗಿ ಪ್ರಧಾನಿಯವರ ಜನ್ಮದಿನ ಆಚರಿಸಿದ ಅಭಿಮಾನಿ

ಕುಂದಾಪುರ: ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ದೇಶದೆಲ್ಲೆಡೆ ಅವರ ಅಭಿಮಾನಿಗಳು ಕೇಕ್ ಕತ್ತರಿಸುವುದರ ಮೂಲಕ ಆಚರಿಸಿಕೊಂಡರೆ, ಕುಂದಾಪುರದ ಕೋಟದಲ್ಲಿ ಮೋದಿಯವರ ಅಭಿಮಾನಿಯೋರ್ವ ವಿಭಿನ್ನ, ವಿಶಿಷ್ಟವಾಗಿ ಪ್ರಧಾನಿಯವರ ಜನುಮ ದಿನವನ್ನು ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬಹಳ ವರ್ಷಗಳಿಂದ ಶ್ರೀ ಸನ್ನಿಧಿ ಹೆಸರಿನ ಕ್ಯಾಂಟಿನ್ ನಡೆಸುತ್ತಿರುವ ಲಕ್ಷ್ಮಣ್‌ರವರು ಕಳೆದ ನಾಲ್ಕು ವರ್ಷಗಳಿಂದಲೂ ತಮ್ಮ ದುಡಿಮೆಯ ಹಣದಿಂದಲೇ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಅಂತೆಯೇ ಈ ಬಾರಿಯೂ ಕೂಡ ಸಾವಿರ ಜನರಿಗೆ ಪಲಾವ್ ಹಾಗು ಟೀಯನ್ನು ಉಚಿತವಾಗಿ ನೀಡುವ ಮೂಲಕ ಪ್ರಧಾನಿಯವರ ಹುಟ್ಟುಹಬ್ಬವನ್ನು ಕೊಂಚ ವಿಭಿನ್ನವಾಗಿ ಆಚರಿಸಿರುವವುದು ಇದೀಗ ಸರ್ವರ ಪ್ರಶಂಸೆಗೆ ಪಾತ್ರರಾಗಿದೆ.ಪ್ರತಿ ವರ್ಷ ಮೋದಿ ಹುಟ್ಟುಹಬ್ಬವನ್ನು ಇವರು ತನ್ನ ವರ್ಷದ ಪರಿಶ್ರಮದ ಹಣದಲ್ಲಿ ಆಚರಿಸುತ್ತಿದ್ದು, ನಿತ್ಯ ಬೆಳಿಗ್ಗಿನಿಂದ ರಾತ್ರಿಯವರೆಗೆ ಕ್ಯಾಂಟಿನ್‌ನಲ್ಲಿ ದುಡಿದು ಸಂಪಾದಿಸುವ ಹಣದಲ್ಲಿ50 ರೂಪಾಯಿ ಹಣವನ್ನು ಮೋದಿ ಬರ್ತ್‌ಡೇ ಆಚರಣೆಗೆಂದೆ ಕೂಡಿಡುತ್ತಾರೆ. ಮೋದಿ ಹುಟ್ಟಿದ ಹಬ್ಬ ಆಚರಿಸೋ ಈ ಅಭಿಮಾನಿಯ ನೋಡಲು ಬಹಳಷ್ಟು ಮಂದಿ ಕ್ಯಾಂಟೀನ್‌ಗೆ ಬಂದಿದ್ದಲ್ಲದೇ ಇವರ ಜೊತೆ ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.ತನ್ನ ಕ್ಯಾಂಟೀನ್ ಎದುರು ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ದೊಡ್ಡದೊಂದು ಪ್ಲೆಕ್ಸ್ ಅಳವಡಿಸಿ ಸ್ಥಳೀಯ ಬಿಜೆಪಿ ಮುಖಂಡರನ್ನು ಕರೆದು ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದ್ದಾರೆ. ಬಳಿಕ ಅಂಗಡಿಗೆ ಬರುವ ಎಲ್ಲರಿಗೂ ಪಲಾವ್ ಹಾಗೂ ಟೀ ಉಚಿತವಾಗಿಯೇ ನೀಡಿದ್ದು, ಸುಮಾರು ೧೫ ಕೆ.ಜಿ ಅಕ್ಕಿಯಿಂದ ಪಲಾವ್,15 ಲೀಟರ್ ಹಾಲಿನಿಂದ ತಯಾರಿಸಿದ ಟೀಯನ್ನು ಎಲ್ಲರೂ ಸವಿದವರು. ಬರೋಬ್ಬರಿ ಒಂದು ಸಾವಿರ ಮಂದಿಗೆ ಉಚಿತ ಟೀ ಹಾಗೂ ಪಲಾವ್ ವ್ಯವಸ್ಥೆ ಮಾಡಿದ್ದಾರೆ.

Related posts

Leave a Reply