Breaking News

ಕುಂಪಲದಲ್ಲಿ ಬಿಜೆಪಿ ವಿಜಯ ಸಂಕಲ್ಪ, ರ್‍ಯಾಲಿ ಮತ್ತು ಕಾರ್ಯಕರ್ತರಿಗೆ ಸನ್ಮಾನ


ತೊಕ್ಕೊಟ್ಟುವಿನಿಂದ ಕುಂಪಲದವರೆಗೆ ನಡೆದ ವಿಜಯ ಸಂಕಲ್ಪ ರ್‍ಯಾಲಿ ಗೆ ಮೋನಪ್ಪ ಬಂಡಾರಿ ಚಾಲನೆ ನೀಡಿದರು.
ಬಿಜೆಪಿ ಕುಂಪಲ ಬೂತ್ ಸಮಿತಿ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷ ಪ್ರಯುಕ್ತ ತೊಕ್ಕೊಟ್ಟುವಿನಿಂದ ಕುಂಪಲದವರೆಗೆ ವಿಜಯ ಸಂಕಲ್ಪ ರ್‍ಯಾಲಿ ಭಾನುವಾರ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಧ್ವಜ ಹಸ್ತಾಂತರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ರಾಜ್ಯ ಕಾರ್‍ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಜಿಪಂ ಮಾಜಿ ಸದಸ್ಯ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮೀತಾ ಶ್ಯಾಮ್, ಬಿಜೆಪಿ ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಜಿ ಡಾ| ಕೆ. ಎ. ಮುನೀರ್ ಬಾವಾ, ಜೀವನ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಕ್ಷ ಭಾರತೀಯ ಪರಿಕಲ್ಪನೆಯ ವಿಚಾರಧಾರೆಯಡಿ ಸ್ಥಾಪಿತವಾದ ಏಕೈಕ ರಾಷ್ಟ್ರೀಯ ಪಕ್ಷವಾಗಿದ್ದು ಇಂತಹ ಪಕ್ಷಕ್ಕೆ ತಳಹದಿ ಹಾಕಿದ ದೀನ್‌ದಯಾಳ್ ಉಪಾಧ್ಯಾಯರು ದೇಶಕ್ಕಾಗಿ ಜೀವನವನ್ನೇ ಅರ್ಪಣೆ ಮಾಡಿದವರಾಗಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಪಕ್ಷವನ್ನು ಮುನ್ನಡೆಸುವ ಕಾರ್ಯ ಆಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಬಿಜೆಪಿ ದ. ಕ. ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ಹಿರಿಯ ಕಾರ್ಯಕರ್ತರಾದ ರಮೇಶ್ ಆಚಾರ್ಯ, ವಿಠಲ ಶೆಟ್ಟಿ, ರಮನಾಥ ಆಳ್ವ, ಪದ್ಮಾವತಿ ಶೆಟ್ಟಿ, ಪುಷ್ಪಲತಾ ಶೆಟ್ಟಿ, ಶೇಖರ ಗಟ್ಟಿ ಬಗಂಬಿಲ, ಯೋಗೀಶ್, ಜಿತೇಂದ್ರ ಬೆಟ್ಟಪ್ಪಾಡಿ, ದಿನೇಶ್ ರಾವ್, ಲತಾ ರಾವ್, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ ಪುಷ್ಪಾ ಟೀಚರ್ ಅವರನ್ನು ಸನ್ಮಾನಿಸಲಾಯಿತು.

Related posts

Leave a Reply