Breaking News

ಕುಂಪಲ ನಡುಪೊಳಿಕೆ ಬಲ್ಯದಲ್ಲಿ ಕೊರಗಜ್ಜ ಗುಡಿಗೆ ಶಿಲಾನ್ಯಾಸ, ಆಡಳಿತ ಮೊಕ್ತೇಸರ ವೆಂಕಪ್ಪ ಮೂಲ್ಯರಿಂದ ಶಿಲಾನ್ಯಾಸ

ಉಳ್ಳಾಲದ ಕುಂಪಲ ನಡುಪೊಳಿಕೆ ಬಲ್ಯದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಕೊರಪೊಳು ಮೈರೆ ನೂತನ ಗುಡಿಯ ಶಿಲಾನ್ಯಾಸ ನೆರವೇರಿತು.
ಶಿಲಾನ್ಯಾಸವನ್ನು ನಡುಪೊಳಿಕೆ ಸ್ವಾಮಿ ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೆಂಕಪ್ಪ ಮೂಲ್ಯ ನೆರವೇರಿಸಿದರು. ಬಳಿಕ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಸುಬ್ರಹ್ಮಣ್ಯ ಮಾತನಾಡಿ, ಪೂರ್ವ ಹಾಗೂ ಪಶ್ಚಿಮ ಎತ್ತರಾಗಿರುವುದರಿಂದ ಹೆಚ್ಚು ಶಕ್ತಿಯಿರುವ ಜಾಗ ನಡುಪೊಳಿಕೆ ಬಲ್ಯ ಆಗಿದ್ದು, ಈ ನಿಟ್ಟಿನಲ್ಲಿ ಸ್ಥಳದಲ್ಲಿ ಶ್ರೀ ಕೊರಪೊಳು ಮೈರೆಗೆ ನೂತನ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಸ್ಥಳದಲ್ಲಿ ಗುಡಿ ನಿರ್ಮಾಣ ಆಗುವವರೆಗೆ ಸ್ಥೂಲ ಶರೀರ ಕಾಪಾಡಬೇಕಿದೆ ಎಂದರು.
ಬಳಿಕ ಮಂಜೇಶ್ವರ ಹಾಗೂ ಉಳ್ಳಾಲದ ಧರ್ಮ ಜಾಗೃತಿ ವೇದಿಕೆ ಅಭಿಮಾನಿ ಬಳಗದ ಕೃಷ್ಣ ಶಿವಕೃಪಾ ಮಾತನಾಡಿ, ತುಳುನಾಡಿನಲ್ಲಿರುವ ಶಕ್ತಿಗಳು ಈಶ್ವರ ದೇವರ ಶಕ್ತಿಗಳಾಗಿವೆ.
ಈ ಸಂದರ್ಭದಲ್ಲಿ ಕಿನ್ಯ ಮಲರಾಯ ಧೂಮಾವತಿ ಹಾಗೂ ಬಂಟ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶಾಸ್ತ ಕಿನ್ಯ, ಉದ್ಯಮಿ ಎ. ಸುಜೀತ್ ಆಳ್ವ ಏತಮೊಗೆರ್ ಗುತ್ತು, ಪ್ರಗತಿಪರ ಕೃಷಿಕ ಹಾಗೂ ಧಾರ್ಮಿಕ ಮುಂದಾಳು ಉಮೇಶ್ ಗಾಂಭೀರ್, ಬಿರುವೆರ್ ಕುಡ್ಲ ಸಂಘಟನೆಯ ಚಂದ್ರಹಾಸ್ ಪಂಡಿತ್ ಹೌಸ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply