Header Ads
Breaking News

ಕುಂಪಲ ಯುವಕನಿಗೆ ಕೋವಿಡ್ ನೆಗೆಟಿವ್ : ಆತಂಕಕ್ಕೆ ಒಳಗಾಗಿದ್ದ ಕುಂಪಲದ ಜನತೆಗೆ ನಿರಾಳ

ಉಳ್ಳಾಲ: ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕುಂಪಲ ಮೂರುಕಟ್ಟೆ ನಿವಾಸಿ ಯುವಕನ ಕೋವಿಡ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಆತಂಕಕ್ಕೆ ಒಳಗಾಗಿದ್ದ ಕುಂಪಲದ ಜನತೆ ನಿರಾಳರಾಗಿದ್ದಾರೆ.

ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವಕನನ್ನು ಶನಿವಾರ ಸಂಜೆ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೊಕ್ಕೊಟ್ಟು ಆಸ್ಪತ್ರೆಗೆ ಮನೆಮಂದಿ ಕೊಂಡೊಯ್ದಿದ್ದ ಸಂದರ್ಭ ಅಲ್ಲಿನ ವೈದ್ಯರು ಕೋವಿಡ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಇದರಿಂದ ಕುಂಪಲ ಭಾಗದಲ್ಲಿ ಜನರಲ್ಲಿ ಆತಂಕ ಉಂಟಾಗಿತ್ತು. ಅಲ್ಲದೆ ಯುವಕ ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಇದ್ದು, ಶುಕ್ರವಾರ ಬೆಳಿಗ್ಗೆ ಕುಂಪಲ ತಾಯಿ ಮನೆಗೆ ಬಂದಿದ್ದನ್ನು. ಇದರಿಂದ ಜನ ಇನ್ನಷ್ಟು ಚಿಂತೆಗೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಗಂಟಲ ದ್ರವ ಪರೀಕ್ಷೆಯ ವರದಿ ಭಾನುವಾರ ಸಂಜೆ ಮನೆಮಂದಿಗೆ ಸಿಕ್ಕಿದ್ದು, ವರದಿ ನೆಗೆಟಿವ್ ಎಂದು ಬಂದಿದೆ. ಯುವಕನನ್ನು ಇಂದು ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಿದ್ದಾರೆ.

Related posts

Leave a Reply

Your email address will not be published. Required fields are marked *