Header Ads
Header Ads
Breaking News

ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಜ್ಞಾನದೀವಿಗೆ ಪುರಸ್ಕಾರ ಪ್ರದಾನ

ಉಳ್ಳಾಲ : ಯುವಸಮುದಾಯ ಕೆಲಸ ಪಡೆದುಕೊಂಡ ತಕ್ಷಣ ಹೆತ್ತವರನ್ನು, ಸಮುದಾಯವನ್ನು ಮರೆಯುವಂತಹ ಕೆಲಸ ಮಾಡುತ್ತಿದೆ. ಆದರೆ ಅಂತಹ ಮನಸ್ಥಿತಿಯ ನ್ನು ದೂರವಾಗಿಸಿ ಶಿಕ್ಷಣದ ಸಂದರ್ಭ ತ್ಯಾಗ ಮಾಡಿದ ಹೆತ್ತವರು, ಸಂಘಟನೆಗಳನ್ನು ಸ್ಮರಿಸುತ್ತಾಮುಂದುವರಿಯುವುದು ಉತ್ತಮ ನಡೆ ಎಂದು ಇನ್ಫೋಸಿಸ್ ಸಂಸ್ಥೆ ಮಂಗಳೂರು ಕೇಂದ್ರ ಮುಖ್ಯಸ್ಥ ವಾಸುದೇವ ಕಾಮತ್ ಅಭಿಪ್ರಾಯಪಟ್ಟರು.ಅವರು ಕುಂಪಲದ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಸೇವಾ ಸಮಿತಿ ಇದರ ವತಿಯಿಂದ ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಭಾನುವಾರ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಪುರಸ್ಕಾರ-2019ಪ್ರಧಾನ ಮಾಡಿ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಮಾತೃಭೂಮಿ ಸೇವಾ ಪ್ರತಿಷ್ಠಾನದ ಜಿಲ್ಲೆಯ ಅಧ್ಯಕ್ಷ ಕೆ.ಟಿ ಸುವರ್ಣ ತೊಕ್ಕೊಟ್ಟು ಉದ್ಘಾಟಿಸಿ ಮಾತನಾಡಿ ಕುಂಪಲ ಬಾಲಕೃಷ್ಣ ಮಂದಿರ ಸಂಘಟನೆಯ ಮೂಲಕ ಎಲ್ಲರನ್ನು ಒಗ್ಗಟ್ಟಾಗಿಸುವ ಕಾರ್ಯ ಮಾಡುತ್ತಿರುವ ಕಾರ್ಯ ಮಹತ್ತರವಾದುದು ಎಂದರು.

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರ.ಕಾರ್ಯದರ್ಶಿ ರವೀಂದ್ರ ಕುಂಪಲ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಮಾಲತಿ ಕೇಶವದಾಸ್, ಉತ್ಸವ ಸಮಿತಿ ಗೌರವಾಧ್ಯಕ್ಷ ಸೋಮಶೇಖರ್ ಕೆ. ಜಗನ್ನಾಥ್, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *