Header Ads
Header Ads
Header Ads
Breaking News

ಕುಕ್ಕಾಜೆ ಕಾಳಿಕಾಂಬ ಕ್ಷೇತ್ರದಿಂದ ಪೊಳಲಿ ಕ್ಷೇತ್ರಕ್ಕೆ ಪಾದಯಾತ್ರೆ

ವಿಟ್ಲ ಸಮೀಪದ ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಕ್ಷೇತ್ರದಿಂದ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರಕ್ಕೆ ಹೊರಟ ಕಾಲ್ನಡಿಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. 

ಭಜನೆ, ನಾಮ ಸಂಕೀರ್ತನೆಗಳ ಮೂಲಕ ಪ್ರಾತ:ಕಾಲದಲ್ಲಿ ಹೊರಟ ಪಾದಯಾತ್ರೆ, ವಿಟ್ಲ ಸೀಮೆಯ ಪ್ರಧಾನ ದೇವಸ್ಥಾನವಾದ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇಗುಲ ಸಂದರ್ಶಿಸಿ ಪಾದಯಾತ್ರೆ ಮುಂದೆ ಸಾಗಿ ಕಲ್ಲಡ್ಕ ಮೂಲಕ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇಗುಲವನ್ನು ಸಂದರ್ಶಿಸಿ ಭೋಜನದ ಬಳಿಕ ಪೊಳಲಿ ಕ್ಷೇತ್ರಕ್ಕೆ ಮುನ್ನಡೆಯಿತು. ಪೊಳಲಿ ಕ್ಷೇತ್ರದಲ್ಲಿ ರಾತ್ರಿ ಶ್ರೀದೇವಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.ಮಾಣಿಲ ಕುಕ್ಕಾಜೆ ಶ್ರೀ ಆಂಜನೇಯ ಕಾಳಿಕಾಂಬ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ 2021ನೇ ವರ್ಷದಲ್ಲಿ ನಡೆಯಲಿದ್ದು, ಅದರ ಯಶಸ್ಸಿಗಾಗಿ ಶ್ರೀ ಕ್ಷೇತ್ರದಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಲಾಗಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *