
ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ತಾನದಲ್ಲಿ ಶ್ರೀದೇವಿಯ 54ನೇ ವರ್ಷದ ವಾರ್ಷಿಕ ಜಾತ್ರೋತ್ಸವ ಫೆ.27ರಿಂದ ಮಾರ್ಚ್ 1ರ ತನಕ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವೈದಿಕ, ಸಾಂಸ್ಕøತಿಕ ಕಾರ್ಯಗಳೊಂದಿಗೆ ನಡೆಯಲಿದೆ.
ಫೆ.27ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ, ಶ್ರೀದೇವಿಯ ಕಲಶ ಪ್ರತಿಷ್ಠೆ, ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. 28ರಂದು ಬೆಳಿಗ್ಗೆ 9 ಗಂಟೆಗೆ ತುಲಾಭಾರ ಸೇವೆ, ಬಳಿಕ ಶ್ರೀದೇವಿ ಭಜನಾ ಮತ್ತು ಕುಣಿತ ಭಜನಾ ತಂಡ ಮುಡಿಪು ಅವರಿಂದ ಕುಣಿತ ಭಜನೆ, ಮಧ್ಯಾಹ್ನ ಶ್ರೀದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಸೇವೆ, ಬಳಿಕ ಭಜನೆ, ದೀಪಾರಾಧನೆ, ಶ್ರೀ ಆಂಜನೇಯ ಸ್ವಾಮೀಯ ಮಹಾಪೂಜೆ, ರಾತ್ರಿ ಸಾಂಸ್ಕøತಿಕ ಕಾರ್ಯಗಳು ನಡೆಯಲಿದೆ. ಮಾರ್ಚ್ 1ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ, ಉದಯಪೂಜೆ ಬಳಿಕ ಪುತ್ತೂರು ಶ್ರೀ ವಜ್ರ ಮಾತಾ ಭಜನಾ ಮಂಡಳಿ ವಯಿಂದ ಭಜನೆ ನಡೆಯಲಿದೆ. ಮಧ್ಯಾಹ್ನ ಶ್ರೀದೇವಿಯ ಮಹಾಪೂಜೆ, ದರ್ಶನ ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಶ್ರೀ ವಿಷ್ಣು ಮೂರ್ತಿ ಭಜನಾ ಜನಾರ್ಧನ ಭಜನಾ ಸಂಘ ಮಂಜನಾಡಿ ಅವರಿಂದ ಭಜನೆ ಸ್ಥಳೀಯರಿಂದ ನೃತ್ಯ ವೈವಿದ್ಯ ನಡೆಯಲಿದೆ. ರಾತ್ರಿ ಶ್ರೀದೇವಿಯ ಮಹಾಪೂಜೆ , ದರ್ಶನ ಬಲಿ ಉತ್ಸವ, ಶ್ರೀ ವಿಷ್ಣು ಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಕೇಂದ್ರ ಮಂಜನಾಡಿ ಅವರಿಂದ ಬಿರ್ದದ ಬೀರೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.27ರಂದು ಶ್ರೀ ಕ್ಷೇತ್ರದ ಉಪದೇವರುಗಳ ಪ್ರತಿಷ್ಟ ಕಲಶಾಭಿಷೇಕ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ನಡೆಯೆಲಿದೆ. ಕ್ಷೇತ್ರದ ಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಕ್ಷೇತ್ರದ ಸುತ್ತು ಗೋಪುರದ ನೈರುತ್ಯ ಭಾಗದಲ್ಲಿ ಶ್ರೀಗಣಪತಿ ದೇವರ ಪ್ರತಿಷ್ಠೆ, ವಾಯುವ್ಯ ಭಾಗದಲ್ಲಿ ಶ್ರೀಆಂಜನೇಯ ದೇವರ ಪ್ರತಿಷ್ಠೆ, ಹಾಗೂ ರಾಜಂಗಣದ ಈಶಾನ್ಯ ಭಾಗದಲ್ಲಿ ಶ್ರೀ ಶಿವ ಸಿರಿ ಕುಮಾರ ಸ್ವಾಮೀಯ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಬೆಳಿಗ್ಗೆ 9.25ರ ಶುಭ ಮುಹೂರ್ತದಲ್ಲಿ ನಡೆಯಲಿದೆ.