Header Ads
Header Ads
Breaking News

ಕುಕ್ಕಿಕಟ್ಟೆ ಬಳಿ ವ್ಯಕ್ತಿಗೆ ರೈಲು ಢಿಕ್ಕಿ:ಆಸ್ಪತ್ರೆಗೆ ದಾಖಲಿಸಿದ ಸಮಾಜಸೇವಕ.

ಉಡುಪಿ:ಕುಕ್ಕಿಕಟ್ಟೆ ರೈಲು ಮಾರ್ಗದಲ್ಲಿ ಗಂಭೀರ ಸ್ವರೂಪದ ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನನ್ನು ಪೊಲೀಸರ ಸಹಕಾರದೊಂದಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.ಗಾಯಳು ತನ್ನ ಹೆಸರು ಅಶೋಕ ಯಾನೆ ಪುಟ್ಟ,(30) ತಂದೆ ದಿ.ಸಿದ್ದು ಪೂಜಾರಿ, ಇಂದ್ರಾಳಿ ದೇವಸ್ಥಾನದ ಸನಿಹದ ಬಿಟ್ಟನ ಅಂಗಡಿ ಹತ್ತಿರ ಮನೆ ಎಂದು ವಿಳಾಸ ನೀಡಿದ್ದಾನೆ. ರೈಲು ಹಳಿ ಸನಿಹ ನಡೆದುಕೊಂಡು ಕುಕ್ಕಿಕಟ್ಟೆಗೆ ಬರುವಾಗ ಚಲಿಸುತ್ತಿರುವ ರೈಲು ತಾಗಿತೆಂದು ಗಾಯಾಳು ಹೇಳಿಕೊಂಡಿದ್ದಾನೆ. ಗಾಯಾಳುವಿನ ಕಾಲು ಜರ್ಜರಿತಗೊಂಡರಿಂದ ವಾರಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡ ತಿಳಿಸಿದ್ದಾರೆ.

Related posts

Leave a Reply