Header Ads
Header Ads
Breaking News

ಕುಕ್ಕುಂದೂರಿನ ಪರಪು ಹೊಳೆಯಲ್ಲಿ ತ್ಯಾಜ್ಯಗಳ ರಾಶಿ

ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪು ಹೊಳೆಯಲ್ಲಿ ತ್ಯಾಜ್ಯಗಳು ಬಿದ್ದಿದ್ದು ಪರಿಸರ ದುರ್ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರಲ್ಲಿ ಕಾಡುತ್ತಿದೆ.


ಕಾರ್ಕಳ – ನಕ್ರೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ನಡುವೆ ಸಾಗುವ ಸೇತುವೆ ಮೇಲಿಂದ ತ್ಯಾಜ್ಯ ವಸ್ತುಗಳನ್ನು ನದಿಗೆ ಪ್ರತಿನಿತ್ಯ ಎಸೆಯಲಾಗಿದ್ದು ಈ ತ್ಯಾಜ್ಯವು ನದಿ ನೀರಿನೊಂದಿಗೆ ಸೇರಿ ಕೊಳೆತು ರೋಗ ಹರಡುವ ಸನ್ನಿವೇಶ ನಿರ್ಮಾಣವಾಗಿದೆ. ಈ ತ್ಯಾಜ್ಯವು ಮಳೆಗಾಲದಲ್ಲಿ ನದಿ ನೀರು ಸೇರಿ ಪರಿಸರ ಸಂಪೂರ್ಣ ಹದಗೆಡುವ ಸಂಭವವಿದೆ. ಪ್ರತಿನಿತ್ಯ ತ್ಯಾಜ್ಯವನ್ನು ಪರಪು ಹೊಳೆಗೆ ಎಸೆಯಲಾಗುತ್ತಿದ್ದರು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಾದ್ಯಂತ ಸ್ವಚ್ಛ ಭಾರತದ ಬಗ್ಗೆ ಅಂದೋಲನ ನಡೆಸಿ ಜನ ಸಾಮಾನ್ಯರಲ್ಲಿ ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತಿದ್ದರೆ ಇತ್ತ ಪರಪು ಪರಿಸರದಲ್ಲಿ ತ್ಯಾಜ್ಯವನ್ನು ಪ್ರತಿನಿತ್ಯ ಸಾರ್ವಜನಿಕ ಸ್ಥಳದಲ್ಲಿ ಉಪಯೋಗಿಸಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿ ಊಟಕ್ಕೆ ಉಪಯೋಗಿಸಿದ ಹಾಳೆ ತಟ್ಟೆ, ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಅಪಾಯಕಾರಿ ಗಾಜಿನ ಚೂರುಗಳನ್ನು ಎಸೆಯಲಾಗುತ್ತದೆ. ಪ್ರತಿನಿತ್ಯ ತ್ಯಾಜ್ಯ, ಕೊಳೆತ ತರಕಾರಿ, ಸತ್ತ ಸಾಕು ಪ್ರಾಣಿಗಳನ್ನು ತಂದು ಹಾಕುತ್ತಾರೆ. ಈ ಹಿಂದೆ ದನದ ರುಂಡವೊಂದು ಈ ಸ್ಥಳದಲ್ಲಿ ಪತ್ತೆಯಾಗಿ ಅಶಾಂತಿಯ ವಾತಾವರಣ ನಿರ್ಮಾಣಗೊಂಡಿತ್ತು. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿ ವರ್ಗದ ಗಮನ ಸೆಳೆದಿದ್ದರು ಪ್ರಯೋಜನವಿಲ್ಲದಂತಾಗಿದೆ ಎಂಬುವುದು ಸ್ಥಳೀಯರ ಅಳಲು. ಮುಂಬರುವ ಮಳೆಗಾಲದ ಮೊದಲು ಈ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮುಂದೆ ಈ ಭಾಗದಲ್ಲಿ ತ್ಯಾಜ್ಯ ಎಸೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

Leave a Reply