

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚಂಪಾಷಷ್ಠಿ ಮಹಾರಥೋತ್ಸವ ಸೇವೆ ನೆರವೇರಿಸಲು ಸೇವಾರ್ಥಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಡಿ.20 ರಂದು ನಡೆಯುವ ಚಂಪಾಷಷ್ಠಿ ಮಹಾರಥೋತ್ಸವದ ದಿನ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಅಪೇಕ್ಷಿಸುವ ಭಕ್ತರು ಕೋವಿಡ್-19 ನಿಯಮ ಪ್ರಕಾರ ಸೇವೆ ನೆರವೇರಿಸಲು ಅವಕಾಶ ಒದಗಿಸಲಾಗಿದೆ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಈ ಹಿಂದೆ ಕೋರೋನಾ ಕಾರಣದಿಂದಾಗಿ ಬ್ರಹ್ಮರಥ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶ ನಿರ್ಬಂದಿಸಲಾಗಿತ್ತು.ಆದರೆ ಇದೀಗ ಕೋವಿಡ್ ನಿಯಮ ಪಾಲಿಸಿಕೊಂಡು ಸೇವೆ ಮಾಡಲು ಅವಕಾಶ ನೀಡಲಾಗಿದೆ. ಕಡ್ಡಾಯ ಮಾಸ್ಕ್ ಧರಿಸಿಕೊಂಡು ಸೇವೆಯಲ್ಲಿ ಪಾಳ್ಗೊಳ್ಳಬೇಕು. 1 ಸೇವೆಗೆ ಇಬ್ಬರಿಗೆ ಮಾತ್ರ ಬ್ರಹ್ಮರಥ ಎಳೆಯುವ ಪಾಸು ನೀಡಲಾಗುವುದು. 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 18 ವರ್ಷಕ್ಕಿಂತ ಕೆಳಗಿನ ಪ್ರಾಯದವರಿಗೆ ಬ್ರಹ್ಮರಥ ಎಳೆಯಲು ಅವಕಾಶವಿಲ್ಲ.ಕೋವಿಡ್ 19 ರೋಗ ಲಕ್ಷಣ ಇರುವ ಸೇವಾರ್ಥಿಗಳಿಗೆ ರಥಬೀದಿ ಪ್ರವೇಶ ನಿಷೇಧಿಸಿದೆ.
ಸೇವೆ ಮಾಡಲಿಚ್ಚಿಸುವ ಭಕ್ತರು ಶ್ರೀ ದೇವಳದ ಬ್ಯಾಂಕ್ ಆಪ್ ಬರೋಡಾದ ಖಾತೆ ಸಂಖ್ಯೆ 70570100004176 ಗೆ ಬಿಎಆರ್ಬಿಒವಿಜೆಎಸ್ಯುಬಿಆರ್ ಐಎಪ್ಎಸ್ಸಿ ಕೋಡ್ಬಳಸಿ ಸೇವೆ ಒಂದರ ಸೇವಾ ಶುಲ್ಕ ರೂ 25 ಸಾವಿರವನ್ನು ಆರ್.ಟಿ.ಜಿ.ಎಸ್, ನೆಪ್ಟ್ ಅಥವಾ ನಗದು ಮೂಲಕ ಶ್ರೀ ದೇವಳಕ್ಕೆ ಜಮೆ ಮಾಡಿ ವಿವರವನ್ನು ದೇವಳಕ್ಕೆ ಇ-ಮೇಲ್ ಸಂದೇಶ ಅಥವಾ ದೇವಳದ ಮೊಬೈಲ್ ಸಂಖ್ಯೆ 9686254831ಯನ್ನು ಸಂಪರ್ಕಿಸಿ ತಿಳಿಸುವಂತೆ ದೇವಳದ ಆಡಳಿತಾಧಿಕಾರಿ ತಿಳಿಸಿದ್ದಾರೆ.