Header Ads
Breaking News

ಕುಕ್ಕೆ ಸುಬ್ರಮಣ್ಯ ದಲ್ಲಿ ಅರ್ಚಕರಿಗೆ ಹಲ್ಲೆಗೈದ ಪ್ರಕರಣದ ಹಿಂದೆ ಸ್ಥಾಪಿತ ಷಡ್ಯಂತ್ರ: ವಿಹಿಂಪ ಆರೋಪ

 ಹಿಂದೂಗಳ ಪ್ರಮುಖ ಶ್ರದ್ಧಾಕೇಂದ್ರ, ಅತ್ಯಂತ ಪವಿತ್ರ ತಾಣವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಮಠ ಇವರೆರಡರ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹ ಷಡ್ಯಂತ್ರ ನಡೆಯುತ್ತಿದೆ. ಈ ಪವಿತ್ರ ಕ್ಷೇತ್ರದಲ್ಲಿ ಪರಸ್ಪರ ಸಂಘದ ಕಿಡಿಗಳನ್ನು ಹಚ್ಚುವ ಹುನ್ನಾರ ನಡೆಯುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಆರೋಪಿಸಿದೆ. ಈ ಕುರಿತು ಮಂಗಳೂರಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಪ್ರೋ.ಎಂ.ಬಿ,ಪುರಾಣಿಕ್, ಕ್ಷೇತ್ರದಲ್ಲಿ ಮಠದ ಅರ್ಚಕರಿಗೆ ಹಲ್ಲೆ ನಡೆಸಿರುವ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಮಠದ ಆರ್ಚಕರಿಗೆ ಹಲ್ಲೆ ಮಾಡಿರುವುದು ತುಂಬಾ ನೋವು ತಂದಿದೆ. ಇದರಲ್ಲಿ ಸ್ಥಾಪಿಸಿ ಹಿತಾಸಕ್ತಿಗಳ ಕೈವಾಡವಿದೆ. ಇಂತಹ ಕೃತ್ಯ ದೇವಸ್ಥಾನದಲ್ಲಿ ನಡೆಯಬಾರದು. ದೇವಸ್ಥಾನ ಕಚೇರಿಯಲ್ಲಿ ಹೊಡೆಯಲು ಅಧಿಕಾರ ನೀಡಿದ್ದು ಯಾರು? ಅಲ್ಲಿನ ಅಧಿಕಾರಿ ಸುಮ್ಮನೆ ಇದ್ದದ್ದು ಯಾಕೆ, ಇದರಲ್ಲಿ ರಾಜಕೀಯ ಕೈವಾಡವಿದೆ ಅಂತಾ ಆರೋಪಿಸಿದ್ರು. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

Related posts

Leave a Reply

Your email address will not be published. Required fields are marked *