

ಕರ್ನಾಟಕ ಸರ್ಕಾರದ ಯೋಜನೆಯಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಆದಿಸುಬ್ರಹ್ಮಣ್ಯ ಕಲ್ಯಾಣ ಪಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ವಿಶೇಷವಾಗಿ ಗಣಹವನ ನಡೆಸಲಾಯಿತು. ಬಳಿಕ ಪುರೋಹಿತರ ಮಂತ್ರಘೋಷದೊಂದಿಗೆ ಜೋಡಿಗಳ ಧಾರಾ ಕಾರ್ಯಕ್ರಮ ನಡೆಯಿತು. ದೇವಸ್ಥಾನ ವತಿಯಿಂದ ತಾಳಿ, ಸೀರೆ, ದೋತಿ, ಸ್ಮರಣಿಕೆ, ಪ್ರಸಾದ ನೀಡಿ ಹರಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್.ಎನ್ ಪ್ರಸಾದ್, ಸದಸ್ಯರಾದ ಲೊಕೇಶ್ ಮುಂಡೊಕಜೆ, ವನಜ ವಿ ಭಟ್, ಶೋಭಾ ಗಿರಿಧರ್ ಸ್ಕಂದ, ಮನೋಹರ ರೈ, ಉಪಸ್ಥಿತರಿದ್ದರು. ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಪ್ಷಲತಾ ದೇವಸ್ಥಾನದ ಸಿಬ್ಬಂದಿಗಳು, ದಂಪತಿಗಳ ಪೋ?ಕರು, ಬಂಧುಗಳು ಉಪಸ್ಥಿತರಿದ್ದರು.
ಮೈಸೂರಿನ ಕಾರಯ್ಯ ಮತ್ತು ರಶ್ಮಿತಾ ಹಾಗೂ ಮಂಜೇ ಗೌಡ ಮತ್ತು ಭಾಗ್ಯ, ಕಡಬದ ಜಗದೀಶ ಮತ್ತು ಕಮಲ, ಕಾರ್ಕಳದ ಪ್ರದೀಪ್ ಮತ್ತು ಅಶ್ವಿನಿ , ಸೋಮವಾರ ಪೇಟೆಯ ಮೋನಪ್ಪ ಮತ್ತು ಬೆಳ್ಳಾರೆಯ ಶಾಂತಲಾ ವಿವಾಹವಾದವರು.