Header Ads
Header Ads
Breaking News

ಕುಕ್ಕೆ ಸುಬ್ರಹ್ಮಣ್ಯ ಘರ್ಷಣೆ ವಿವಾದ: ಚೈತ್ರಾ ಕುಂದಾಪುರ ಸಹಿತ 6 ಮಂದಿಗೆ ನ್ಯಾಯಂಗ ಬಂಧನ

ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಸಹಿತ6 ಮಂದಿ ಬೆಂಬಲಿಗರ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಗೆಳೆಯರ ಮೇಲೆ ಮಾರನಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಅ.೨೫ರಂದು ಸಂಜೆ ವೇಳೆಗೆ ಹಾಜರುಪಡಿಸಿದರು. ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಚೈತ್ರಾ ಕುಂದಾಪುರ, ಸುದಿನ, ವಿನಯ, ಮಣಿಕಂಠ, ನಿಖಿಲ್, ಹರೀಶ್ ಖಾರ್ವಿ ಹಾಗೂ ಹರೀಶ್ ನಾಯಕ್ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದ ಬಳಕೆ ಹಿನ್ನಲೆ ಕೇಸು ದಾಖಲಿಸಿ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಯ ಸಂಬಂಧ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು ಗುರುಪ್ರಸಾದ್ ಚೈತ್ರಾ ಕುಂದಾಪುರ ಹಾಗೂ ಇತರ ಆರು ಮಂದಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ. ಘಟನೆ ಸಂಬಂಧ ಚೈತ್ರಾ ಕುಂದಾಪುರ ಕೂಡಾ ತನ್ನ ಮೇಲೆ ಅಸಭ್ಯವಾಗಿ ವರ್ತಿಸಿ ತಳ್ಳಾಟ ನಡೆಸಿ ಸರವೊಂದನ್ನು ಕಿತ್ತುಕೊಂಡಿರುವುದಾಗಿ ಪ್ರತಿದೂರು ನೀಡಿದ್ದಾಳೆ.ಇತ್ತಿಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚೈತ್ರಾ ಕುಂದಾಪುರ ಕುಕ್ಕೆ ದೇವಸ್ಥಾನದಲ್ಲಿ ನಡೆಯುತ್ತಿರುವ ಸರ್ಪಸಂಸ್ಕಾರ ಸೇವೆ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದರು. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಪೇಸ್‌ಬುಕ್‌ನಲ್ಲಿ ಚೈತ್ರಾ ಕುಂದಾಪುರ ಮತ್ತು ಗುರುಪ್ರಸಾದ್ ಪಂಜರ ನಡುವೆ ಚರ್ಚೆಗಳಾಗುತ್ತಿದ್ದವು. ಇದೇ ವಿಷಯ ಬುಧವಾರ ಚೈತ್ರಾ ಮತ್ತು ಗುರುಪ್ರಸಾದ್ ಹಾಗೂ ಆಶೀತ್ ಕಲ್ಲಾಜೆ ಮಧ್ಯೆ ದೂರಾವಾಣಿ ಮೂಲಕ ಚರ್ಚೆ ನಡೆದಿತ್ತು. ಈ ವೇಳೇ ಪರಸ್ಪರ ಸವಾಲು ಹಾಕುವ ಮಟ್ಟಿಗೆ ಹೋಗಿತ್ತು. ಪೋನಿನಲ್ಲೆ ನಿಮಗೆ ತಾಕತ್ತಿದ್ದರೆ ಬನ್ನಿ, ನಾನೇ ನಿಮ್ಮ ಎದುರಿಗೆ ಬಂದು ನಿಲ್ಲುತ್ತೇನೆ ಎಂದು ಚೈತ್ರಾ ಸವಾಲು ಹಾಕಿದ್ದಳು. ಅದರಂತೆ ಸಂಜೆ ವೇಳೆಗೆ ಇನೋವಾ ಕಾರಿನಲ್ಲಿ ಬೆಂಬಲಿಗರೊಂದಿಗೆ ಬಂದ ಚೈತ್ರಾ ಕುಂದಾಪುರ ಏರುಧ್ವನಿಯಲ್ಲಿ ವಿಚಾರಿಸಿ ಗುರುಪ್ರಸಾದ್ ಮತ್ತು ಇತರರ ಮೇಲೆ ಕೈ ಹಾಕಿದ್ದಾರೆ. ಅಲ್ಲದೇ ಚೈತ್ರಾ ಬೆಂಬಲಿಗನೊಬ್ಬ ಕಬ್ಬಿಣದ ರಾಡ್‌ನಿಂದ ಗುರುಪ್ರಸಾದ್ ತಲೆಗೆ ಹೊಡೆದಿದ್ದನು. ತಲೆಗೆ ಗಾಯಗೊಂಡ ಗುರುಪ್ರಸಾದ್ ಸುಳ್ಯದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಈತನ ವಿರುದ್ಧ ಕಳ್ಳತನ ಹಾಗೂ ಮಾನಭಂಗ ಯತ್ಬ ಸಂಬಂಧ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ.ಚೈತ್ರಾ ಕುಂದಾಪುರ ಮತ್ತು ಆಕೆಯ ಬೆಂಬಲಿಗರ ವರ್ತನೆ ಖಂಡಿಸಿ ಇಂದು ವರ್ತಕರು ಮತ್ತು ಊರವರು ಹಾಗೂ ಸಂಘಟನೆಯವರು ಕರೆ ನೀಡಿದ ಸುಬ್ರಹ್ಮಣ್ಯ ಬಂದ್ ನಡೆಯಿತು. ಸುಬ್ರಹ್ಮಣ್ಯ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಕುಕ್ಕೆ ದೇವಳದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕುಮಾರಧಾರ ನದಿವರೆಗೆ ಚೈತ್ರಾ ಕುಂದಾಪುಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದರು.

Related posts

Leave a Reply