Header Ads
Header Ads
Breaking News

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಸಮಸ್ಯೆಯಾಗಿದೆ:ಪೇಜಾವರ ಶ್ರೀ ಹೇಳಿಕೆ

 ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ. ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ ಅಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಡಬಾರದು.

ಮಠದ ಗೋಶಾಲೆಗೆ ದೇವಳದ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿದೆ. ಸರ್ಪ ಸಂಸ್ಕಾರಕ್ಕೆ ಎಲ್ಲೂ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ. ಈ ನಿಲುವಿನಿಂದ ಸಮಾಜಕ್ಕೆ ತೊಂದರೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ.ಕುಕ್ಕೆ ದೇವಸ್ಥಾನ -ಮಠದ ಸಂಘರ್ಷ ಸರಿಯಲ್ಲ. ದೇವಾಲಯದ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡೋಣ. ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದ್ರ ಸರಿಪಡಿಸೋಣ ಎಂದು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಪಲಿಮಾರು ಶ್ರೀ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಭಾಗಿಯಾಗಿದ್ದರು.

Related posts

Leave a Reply