Header Ads
Header Ads
Breaking News

ಕುಟುಂಬ ಶ್ರೀಯಿಂದ ಸಮನ್ವಯ ತರಬೇತಿ ಶಿಬಿರ ಶಿಬಿರ ಉದ್ಘಾಟಿಸಿದ ಜಿಲ್ಲಾಧಿಕಾರಿ ಜೀವನ್

 

ಮಂಜೇಶ್ವರ: ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಹಕರಿಸಿ ಕುಟುಂಬ ಶ್ರೀ ಜಿಲ್ಲಾ ಮಿಶನ್ ಜ್ಯಾರಿಗೊಳಿಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಕುಟುಂಬ ಶ್ರೀ ಸಮನ್ವಯ ತರಭೇತಿ ಶಿಬಿರವನ್ನು ಆಯೋಜಿಸಿತು.

ಜಿಲ್ಲಾಧಿಕಾರಿ ಕಾನ್ಫೆರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ ಜೀವನ್ ಬಾಬು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕುಟುಂಬ ಶ್ರೀ ಎಂಬ ಈ ಸಂಘಟನೆಯ ವ್ಯಾಪ್ತಿ ಬಹಳ ದೊಡ್ಡದಿದೆ. ಇತರ ಇಲಾಖೆಗಳ ಜೊತೆಗೂಡಿ ಅವರೊಂದಿಗೆ ಚರ್ಚಿಸಿ ಯಾವುದಾದರೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಿದ್ದರೆ ಅದು ಒಳಿತು. ಎಲ್ಲಾ ಇಲಾಖೆಗಳ ಸಹಕಾರ ಕೂಡಾ ಸಿಗುತ್ತದೆ ಎಂದು ಹೇಳಿದರು. ಕೆ ವಿನೋದ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಗೌರಿ ಮುಖ್ಯ ಅತಿಥಿಯಾಗಿದ್ದರು. ಕೆ ಪಿ ರಂಜಿತ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಿ ಬೈಜು ಹಾಗೂ ಪುನೀತ್ ತರಭೇತಿ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply