Header Ads
Header Ads
Breaking News

ಕುಡಿದ ಮತ್ತಿನಲ್ಲಿ ಮಾವನಿಂದಲೇ ಅಳಿಯನ ಕೊಲೆ

 ಕುಡಿದ ಮತ್ತಿನಲ್ಲಿ ಮಾವ ಮತ್ತು ಅಳಿಯನ ನಡುವಿನ ವಾಗ್ವಾದ ತಾರಕಕ್ಕೇರಿ ಹೊಡೆದಾಟ ನಡೆದು ಅಳಿಯನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.ಇಲ್ಲಿನ ಬಡೆಕೊಟ್ಟು ನಿವಾಸಿ ರಮಾನಂದ(52) ಮೃತ ದುರ್ದೈವಿಯಾಗಿದ್ದು, 70 ವರ್ಷ ವಯಸ್ಸಿನ ಮಾವ ಅಮ್ಮನ್ನ ಪೂಜಾರಿ ಕೊಲೆಗೈದ ಆರೋಪಿ ಎಂದು ಹೇಳಲಾಗಿದೆ.
ಮೂಲತಃ ಬಣಕಲ್ ನಿವಾಸಿ ರಮಾನಂದ ಕಳೆದ ಹಲವು ವರ್ಷಗಳಿಂದ ತನ್ನ ಪತ್ನಿ ಮೋಹಿನಿಯ ತಂದೆ ಅಮನ್ನ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯವಿದ್ದರು. ರಮಾನಂದ ಮೋಹಿನಿ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆ ನಡೆದಿದ್ದು, ಇನ್ನಿಬ್ಬರು ಹೆಣ್ಣುಮಕ್ಕಳು ಮೂಡಬಿದಿರೆಯ ಬಟ್ಟೆಮಳಿಗೆಯಲ್ಲಿ ದುಡಿಯುತ್ತಿದ್ದಾರೆ. ಪತ್ನಿ ಮೋಹಿನಿ ಹತ್ತಿರದ ಮನೆಗಳಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದಾರೆ.


ಕೆಲಸಕ್ಕೆ ತೆರಳಿದ್ದ ರಮಾನಂದ ರ ಪತ್ನಿ ಮನೆಗೆ ಬಂದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ಮನೆ ಹಿಂಭಾಗದ ತೆಂಗಿನ ಹೊಂಡದಲ್ಲಿ ರಮಾನಂದ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಆರೋಪಿ ಎನ್ನಲಾದ ಅಮನ್ನ ಪೂಜಾರಿಯವರಿಗೂ ಹೊಡೆದಾಟದ ವೇಳೆ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಮನೆ ಪರಿಸರದಲ್ಲಿ ಭಾರೀ ಜನಜಮಾಯಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

Related posts

Leave a Reply