Header Ads
Header Ads
Breaking News

ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರ ಅಮ್ಮನವರ, ಜಾರಂದಾಯ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ

ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರು, ವಾಸುಕೀ ನಾಗದೇವರು, ಜಾರಂದಾಯ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಬೈಕಂಪಾಡಿಯಲ್ಲಿ ನಡೆಯಿತು.

ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿರು. ಆನಂತರ ವಿಜ್ಞಾಪನಾ ಪತ್ರವನ್ನು ಡಿಐಸಿ ಮಂಗಳೂರಿನ ಜಂಟಿ ನಿರ್ದೇಶಕರಾದ ಗೋಕುಲ್‌ದಾಸ್ ನಾಯಕ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಕ್ಷೇತ್ರ ಪುನರ್ ನಿರ್ಮಾಣ ಆಗಬೇಕು. ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿದ್ದು, ಇಲ್ಲಿರುವ ಧಾರ್ಮಿಕ ಕ್ಷೇತ್ರವು ಅಭಿವೃದ್ದಿಗೊಳ್ಳಲಿ ಎಂದು ಹಾರೈಸಿದರು. 

ಈ ಸಂದರ್ಭ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ, ಮಂಗಳೂರಿನ ಕೆಎಸ್‌ಐಎ ಅಧ್ಯಕ್ಷರಾದ ಗೌರವ್ ಹೆಗ್ಡೆ, ಜಯರಾಜ್ ಪೈ, ಪಂಜ ನಲ್ಯಗುತ್ತು ಗುತ್ತಿನಾರ್ ಕೆ ಭೋಜ ಶೆಟ್ಟಿ ಮತ್ತು ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸೇವಾಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *