Header Ads
Header Ads
Breaking News

ಕುಡುಪು ದೇವಳದಲ್ಲಿ ನಾಗ ದೇವರಿಗೆ ವಿಶೇಷ ಪೂಜೆ. ಬೆಳಿಗ್ಗಿನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು.

ಇಂದು ನಾಡಿನಾದ್ಯಂತ ನಾಗರಪಂಚಮಿ ನಾಡಿಗೆ ಬರುವ ಪ್ರಥಮ ಹಬ್ಬ ನಾಗರಪಂಚಮಿಯನ್ನು ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಅನಂತಪದ್ಮನಾಭ ದೇವಸ್ಥಾನ ಕುಡುಪುವಿನಲ್ಲಿ ಇವತ್ತು ಬೆಳಿಗ್ಗೆನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ದೇವರಿಗೆ ಕ್ಷೀರ ಅಭಿಷೇಕ, ತಂಬಿಲ ಅಭಿಷೇಕ, ಸೀಯಾಲ ಅಭಿಷೇಕವನ್ನು ವಿಶೇಷವಾಗಿ ಸಲ್ಲಿಸಿದರು.

ತನ್ನೆಲ್ಲಾ ಸಂಕಷ್ಟಗಳನ್ನು ಪರಿಹರಿಸುವಂತೆ ನಾಗದೇವರಿಗೆ ನಾಗರಪಂಚಮಿ ದಿನದಂದು ಬೆಳ್ಳಿಯ ಅಭರಣ ಹಾಗೂ ಹಾಲುನ್ನು ಸಮರ್ಪಿಸುವುದು ಮತ್ತೊಂದು ವಿಶೇಷ. ಒಟ್ಟಾರೆ ಅಗಿ ತುಳುನಾಡಿನಲ್ಲಿ ನಾಗರಪಂಚಮಿ ಹಬ್ಬವನ್ನು ಶ್ರದ್ಧ ಭಕ್ತಿಯಿಂದ ಅಚರಿಸುವ ಮೂಲಕ ನಾಗದೇವರು ಎಲ್ಲಾ ಪೂಜೆಗಳಿಂದ ಸಂತುಷ್ಟನಾಗುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು..

Related posts

Leave a Reply