Header Ads
Breaking News

ಕುಡ್ಲ ಕ್ವೀನ್ಸ್ ಸಿಟಿಗೈಸ್ ಡಾನ್ಸ್ ಕ್ರ್ಯೂನಿಂದ ಮೂಡಿಬರಲಿದೆ ‘ಟ್ಯಾಲೆಂಟ್ ಹಂಟ್’

 ಪ್ರತಿಭೆ ಎಲ್ಲರಲ್ಲೂ ಇದ್ದೇ ಇರುತ್ತೆ, ಒಂದಲ್ಲ ಒಂದು ವಿಷಯಗಳಲ್ಲಿ ಎಲ್ಲರೂ ಕೂಡ ಪರಿಣಿತರಾಗಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಗಳು ಸಿಗದೆ ಅವಕಾಶ ವಂಚಿರಾಗಿರುತ್ತಾರೆ. ಅಂತಹ ಪ್ರತಿಭೆಗಳಿಗಾಗಿಯೇ ಒಂದು ಹೊಚ್ಚ ಹೊಸ ವೇದಿಕೆ ಮಂಗಳೂರಿನಲ್ಲಿ ಸೃಷ್ಟಿಯಾಗಿದೆ. ಅದುವೇ ಕುಡ್ಲ ಕ್ವೀನ್ಸ್ ಸಿಟಿ ಗೈಸ್ ಡಾನ್ಸ್ ಕ್ರ್ಯೂ. ಈ ತಂಡದ ಮೂಲಕ ವಿ4 ಸ್ಟ್ರೀಮ್ ಒಟಿಟಿಯಲ್ಲಿ ಒಂದು ವಿಭಿನ್ನ ಕಾರ್ಯಕ್ರಮ ಮೂಡಿಬರೋದಿಕ್ಕೆ ತಯಾರಾಗುತ್ತಿದೆ.

ವಿ4ನ್ಯೂಸ್‍ನ ವಿ4 ಸ್ಟ್ರೀಮ್ ಮೂಲಕ ಈಗಾಗಲೇ ಸಿನಿಮಾ, ಡ್ರಾಮಾ, ಸಾಂಗ್ಸ್, ವೆಬ್ ಸೀರಿಸ್ ಹೀಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಸ್ಟ್ರೀಮಿಂಗ್ ಆಗಿದ್ದು, ಇದರ ಜೊತೆಗೆ ಟ್ಯಾಲೆಂಟ್ ಹಂಟ್‍ಕೂಡ ಮೂಡಿಬರಲಿದೆ. ಹೊಸ ಪ್ರತಿಭೆಗಳಿಗೆ ಹೊಸ ರೀತಿಯ ವೇದಿಕೆಯನ್ನು ಕಲ್ಪಿಸಿ ತೆರೆ ಮರೆಯ ಪ್ರತಿಭೆಗಳ ಅನಾವರಣಕ್ಕೆ ಹೊರಟಿದೆ ಮಂಗಳೂರಿನ ಹೊಸ ತಂಡ, ಕುಡ್ಲ ಕ್ವೀನ್ಸ್ ಸಿಟಿ ಗಯ್ಸ್ ಡಾನ್ಸ್ ಕ್ರ್ಯೂ. ಸುಧೀರ್ ಉಳ್ಳಾಲ್‍ರವರ ನೇತೃತ್ವದಲ್ಲಿ ನಡೆಯಲಿರುವ ಈ ತಂಡ ಎಲೆ ಮರೆಕಾಯಿಂತೆ ಬೆಳೆಯುತ್ತಿರುವ ಕಲಾವಿದರಿಗೆ ಹೊಸ ಹುಮ್ಮಸಿನ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಇದೊಂದು ಡಾನ್ಸ್ ತಂಡವಾಗಿದ್ದರೂ ಕೂಡ ಬರೀ ಡಾನ್ಸ್‍ಗೆ ಪ್ರಾಮುಖ್ಯತೆಯನ್ನು ನೀಡದೆ ಸಂಗೀತ, ಅಭಿನಯ ಹೀಗೆ ಬೇರೆ ಬೇರೆ ವಿಷಯಗಳಿಗೂ ಪ್ರಾಮುಖ್ಯತೆಯನ್ನು ನೀಡಲಿದ್ದಾರೆ. ಮನೆಯಲ್ಲಿಯೇ ಕುಳಿತು ಪ್ರತಿಭಾ ಅನಾವರಣಕ್ಕೆ ಹೊಸ ರೀತಿಯ ಅವಕಾಶ ಇದಾಗಿದೆ. ಜೀವನದಲ್ಲಿ ಏನಾದರು ಕಲಾವಿದನಾಗಿ ಸಾಧಿಸಬೇಕುನ್ನುವ ಛಲ ಹೊತ್ತ ಯುವಕ/ ಯುವತಿಯರಿಗೆ ಈ ಮೂಲಕ ಹೊಸ ವೇದಿಕೆಯನ್ನು ತಂಡವು ಒದಗಿಸುತ್ತಿದೆ. ಈ ಹೊಸ ತಂಡದ ಪ್ರಯತ್ನಕ್ಕೆ ಕರ್ನಾಟಕದ ಮೊಟ್ಟ ಮೊದಲ ಓಟಿಟಿ ಪ್ಲಾಟ್ ಫಾರಂ ವಿ4 ಸ್ಟ್ರೀಮ್ ಜೊತೆಯಾಗಲಿದೆ.

Related posts

Leave a Reply

Your email address will not be published. Required fields are marked *