Header Ads
Breaking News

ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ ‘ನಮ್ಮ ನಡೆ’ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಹಿಂದೂ ಶ್ರಧ್ಧಾ ಕೇಂದ್ರಗಳಲ್ಲಿ ದುಷ್ಕøತ್ಯ ಎಸಗುತ್ತಿರುವ ದುಷ್ಕರ್ಮಿಗಳ ಕೃತ್ಯಗಳ ವಿರುದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಸೇವಾ ಟ್ರಸ್ಟಿನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿದೆ. ನಾವು ನಾವಾಗಿಯೇ ಉಳಿಯಲು ಸಂಸ್ಕøತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ. ಇದನ್ನು ಹಾಳುಗೆಡವಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ ಎಂದ್ರು.
ಈ ವೇಳೆ ಕೊರಗಜ್ಜ ಹಾಡು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಮತ್ತು ಆತನಿಗೆ ಹಾಡು ಕಲಿಸಿದ ಸಹೋದರಿ ರಕ್ಷಿತಾಳನ್ನು ಸ್ವಾಮೀಜಿ ಸನ್ಮಾನಿಸಿದರು.
ಈ ವೇಳೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ . ಎಂ.ಬಿ ಪುರಾಣಿಕ್, ತುಳು ಜಾನಪದ ವಿಧ್ವಾಂಸ ಕೆ.ಕೆ ಪೇಜಾವರ, ಶ್ರೀ ಪಂಜಂದಾಯ ಬಂಟ ದೈವಸ್ಥಾನ ಮತ್ತು ಶ್ರೀ ಕೊರಗ ತನಿಯ ಆದಿಸ್ಥಳಗಳ ಆಡಳಿತ ಮೊಕ್ತೇಸರ ರವೀಂದ್ರನಾಥ್ ಪೂಂಜ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *