Header Ads
Breaking News

ಕುದ್ರುವಿನಲ್ಲಿ ಮರಳಿನಲ್ಲಿ ಮೂಡಿದ ಶ್ರೀದೇವಿ ಮರಳು ಶಿಲ್ಪ : ಪ್ರಖ್ಯಾತ ಮರುಳು ಶಿಲ್ಪ ಕಲಾವಿದರಿಂದ ಶ್ರೀ ದುರ್ಗಾಪರಮೇಶ್ವರಿ ರಚನೆ

ಶ್ರೀ ದುರ್ಗಾಪರಮೇಶವರೀ ದೇವಸ್ಥಾನ ಕಟೀಲಿನಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ಅಂಗವಾಗಿ ಪುತ್ತೂರಿನ ಕುದ್ರುವಿನಲ್ಲಿ ಮರಳಿನಲ್ಲಿ ಮೂಡಿದ ಶ್ರೀದೇವಿ ಮರಳು ಶಿಲ್ಪವನ್ನು ನೋಡಲು ಭಕ್ತರ ದಂಡೇ ಹರಿದು ಬರುತ್ತಿತ್ತು.

ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಪ್ರಖ್ಯಾತ ಮರುಳು ಶಿಲ್ಪ ಕಲಾವಿದರಿಂದ ಮರಳಿನಲ್ಲಿ ಶ್ರೀ ದೇವಿ ದುರ್ಗಾಪರಮೇಶ್ವರೀಯ ಶಿಲ್ಪ ರಚಿಸಿದ್ದು ವಿಶೇಷವಾಗಿತ್ತು.ಮೂಲತಃ ಬಂಟ್ವಾಳದ ಹರೀಶ್ ಎಂಬವರು ಪ್ರಖ್ಯಾತ ಮರುಳು ಶಿಲ್ಪದಲ್ಲಿ ಅತ್ಯಂತ ಪ್ರವೀಣರಾಗಿದ್ದು ಈ ಹಿಂದೆ ಮಂಗಳೂರು ಕದ್ರಿ ದೇವಾಲಯದಲ್ಲಿ, ಕುಡುಪು ದೇವಳದಲ್ಲಿ ಹಾಗೂ ಬೀಚ್ ಉತ್ಸವಗಳಲ್ಲಿ ಹಾಗೂ ಶಾಲೇ ಕಾಲೇಜುಗಳಲ್ಲಿ ಹಲವಾರು ಮರಳು ಶಿಲ್ಪವನ್ನು ರಚಿಸಿ ಪ್ರಖ್ಯಾತಿಯನ್ನು ಗಳಿಸಿದ್ದರು. ಇದೀಗ ಕಟೀಲಿನ ಸಂಭ್ರಮದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ದೇವಿಯ ಮರುಳು ಶಿಲ್ಪವನ್ನು ರಚಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. “ಸಾಕಷ್ಟು ಮರುಳು ಶಿಲ್ಪವನ್ನು ರಚಿಸಿದ್ದೇನೆ ಆದರೆ ಕಟೀಲು ಮಾತೆಯ ಬ್ರಹ್ಮಕಲಶೋತ್ಸವದ ಸಂದರ್ಭ ದೇವಿಯ ಮರುಳು ಶಿಲ್ಪವನ್ನು ರಚಿಸಲು ಅವಕಶ ದೊರೆತಿರುವುದು ತುಂಬಾ ಸಂತಸ ತಂದಿದೆ. “

Related posts

Leave a Reply

Your email address will not be published. Required fields are marked *