Header Ads
Header Ads
Breaking News

ಕುದ್ರೋಳಿಯ ಇಸ್ಲಾಮಿಕ್ ದಾವಾ ಸೆಂಟರ್‌ನಲ್ಲಿ ರಕ್ತದಾನ ಶಿಬಿರ

ಕುದ್ರೋಳಿಯ ಜಮಾಅತೆ ಇಸ್ಲಾಮೀ ಹಿಂದ್, ಸಮಾಜ ಸೇವಾ ಘಟಕದ ವತಿಯಿಂದ ರಕ್ತದಾನ ಶಿಬಿರವು ಕುದ್ರೋಳಿಯ ಇಸ್ಲಾಮಿಕ್ ದಾವಾ ಸೆಂಟರ್‌ನಲ್ಲಿ ನಡೆಯಿತು.


ರಕ್ತದಾನ ಶಿಬಿರವನ್ನು ವಿ4 ನ್ಯೂಸ್ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಕ್ತದಾನ ಶಿಬಿರ ಒಂದು ಉತ್ತಮ ಕಾರ್ಯಕ್ರಮ, ರಕ್ತಕ್ಕೆ ಜಾತಿ, ಧರ್ಮ ಯಾವುದೂ ಇಲ್ಲ. ಪ್ರತಿಯೊಬ್ಬರು ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಲು ಪ್ರಯತ್ನಿಸಿ ಎಂದ ಅವರು, ಕುದ್ರೋಳಿಯ ಜಮಾಅತೆ ಇಸ್ಲಾಮೀ ಹಿಂದ್‌ನ ಸಮಾಜ ಸೇವಾ ಘಟಕದಿಂದ ಸಮಾಜಮುಖಿ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಅನಂತರ ಕುದ್ರೋಳಿಯ ಕೆಡುಕು ಮುಕ್ತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಕ್ಬೂಲ್ ಅಹಮ್ಮದ್ ಮಾತನಾಡಿ, ಪ್ರತೀ ವರ್ಷ ರಕ್ತದಾನವನ್ನು ಜಮಾತ್ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ಹಮ್ಮಿಕೊಳ್ಳುತ್ತಿದ್ದಾರೆ. ರಕ್ತದಾನದ ಬಗ್ಗೆ ಜನರಿಗೆ ಅರಿವನ್ನು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಮತ್ತು ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಡಾ. ಫರ್‌ಝಾನಾ, ಮುಝಾಹಿರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply