Header Ads
Header Ads
Breaking News

ಕುದ್ರೋಳಿ ಪ್ರಾಣಿ ವಧಾಗೃಹವನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪ-ಪ್ರಧಾನ ಮಂತ್ರಿ, ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತೇನೆ ಸಚಿವ ಯು.ಟಿ. ಖಾದರ್ ಹೇಳಿಕೆ

ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಸ್ವಚ್ಚ ಮಂಗಳೂರಿನ ಕಲ್ಪನೆಯಿಂದ ಕುದ್ರೋಳಿಯ ಕಸಾಯಿಖಾನೆ ಅಭಿವೃದ್ಧಿ15ಕೋಟಿ ನೀಡುವಂತೆ ಸಲಹೆ ಮಾತ್ರ ನೀಡಿದ್ದೇನೆ. ಆದರೇ ಈ ಬಗ್ಗೆ ಅನೇಕ ವಿರೋಧವನ್ನು ಹಬ್ಬಿಸಿದರ ಬಗ್ಗೆ ಬೇಸರವಾಗಿದೆ. ನಾನು ಪ್ರದಾನ ಮಂತ್ರಿ ಹಾಗೂ ಕೇಂದ್ರ ನಗಾರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳದರು.

ಇವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಸ್ವಚ್ಚ ಮಂಗಳೂರು ನಿರ್ಮಾಣ ಮತ್ತು ಜನರಿಗೆ ಆರೋಗ್ಯಕರ ಆಹಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಸಾಯಿಖಾನೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾವನೆ ಮಾಡಿದ್ದೇನೆ ಅದರ ಅನುಷ್ಟಾನಕ್ಕೆ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು. ಈ ಬಗ್ಗೆ ಕೆಲವು ನಾಯಕರು ಮತ್ತು ಸಂಘ ಸಂಸ್ಥೆಗಳು ಆರೋಪ-ಪ್ರತ್ಯಾರೋಪ ನಡೆಸಿ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೇಸ್‌ನ ಕೆಲವು ನಾಯಕರು ಉಪಸ್ಥಿತರಿದ್ದರು.

Related posts

Leave a Reply