Header Ads
Breaking News

ಕುಪ್ಪೆಪದವಿನಲ್ಲಿ ಬ್ಲಡ್ ಹೆಲ್ಫ್ ಲೈನ್ ಕರ್ನಾಟಕ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ

ಸೋಲಿಡಾರಿಟಿ ಯೂತ್ ಮೂಮೆಂಟ್ ಕುಪ್ಪೆಪದವು ಮತ್ತು ಎನ್‌ಎಫ್‌ಸಿ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಕುಪ್ಪೆಪದವಿನ ಕಾವೇರಿ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಬಿರದ ಸಭಾ ಕಾರ್ಯಕ್ರಮವನ್ನು ಎನ್‌ಎಫ್‌ಸಿ ಅಧ್ಯಕ್ಷರಾದ ಜನಾಬ್ ಮುಸ್ತಫರವರ ಅಧ್ಯಕ್ಷತೆಯಲ್ಲಿ ಸಮಾಗಮ ಸೇವಾಕೇಂದ್ರದ ಕೆ ಪುರುಷೋತ್ತಮ,ಸೋಲಿಡಾರಿಟಿ ಯೂತ್ ಮೂಮೆಂಟ್ ಉಪಾಧ್ಯಕ್ಷ ಜನಾಬ್ ಶಫೀಕ್ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಜನಾಬ್ ಮುಸ್ತಫಾ ಅಡ್ಡೂರು ದೆಮ್ಮಲೆಯವರ ಘನ ಉಪಸ್ಥಿತಿಯಲ್ಲಿ ಸಮಾಜ ಸೇವಕರಾದ ಜನಾಬ್ ಮುನೀರ್ ನಡುಪಲ್ಲರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸುಲೈಮಾನ್,ನ್ಯಾಯವಾದಿ ಪುನೀತ್,ಹಸನ್ ಬಾವಾ,ಅಬ್ದುಲ್ ಖಾದರ್,ಫೈಝಲ್ ಮಂಚಿ, ಶರೀಫ್ ನೆಲಚ್ಚಿಲ್,ಕೆ.ಪಿ ಉಮರಬ್ಬ,ಶರೀಫ್,ಪ್ರವೀಣ್ ಆಳ್ವ,ಜಬ್ಬಾರ್, ಯಾದವ್ ಬಳ್ಳಿ, ಜಗದೀಶ್, ಸೋಲಿಡಾರಿಟಿ ಯೂತ್ ಮೂಮೆಂಟ್ ಕುಪ್ಪೆಪದವು ಮತ್ತು ಎನ್‌ಎಫ್‌ಸಿ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *