Header Ads
Header Ads
Breaking News

ಕುಮಾರಸ್ವಾಮಿಯವರ ತೀರ್ಥಯಾತ್ರೆಯ ಫಲ ಸಿಗುತ್ತಿದೆ.ಯಡಿಯೂರಪ್ಪರಿಗೆ ಇನ್ನೂ ಫಲ ಸಿಕ್ಕಿಲ್ಲ.ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿಕೆ

ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರು, ಮಂಗಳೂರಿನ ಅಡ್ಯಾರ್ – ಹರೇಕಳ ಕಿಂಡಿ ಅಣೆಕಟ್ಟು ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದ್ರು. ಇದೇ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ದೇವರ ಆಶೀರ್ವಾದ ಪಡೆಯುವುದರಲ್ಲಿ ಬಹಳ ಮುಂದೆ ಇದ್ದಾರೆ. ಯಡಿಯೂರಪ್ಪರ ಯಾವ ಪೂಜೆಯ ಫಲವೂ ಫಲಿಸಲ್ಲ. ಯಡಿಯೂರಪ್ಪ ಇದೇ ರೀತಿ ತೀರ್ಥಯಾತ್ರೆಗೆ ತೆರಳುತ್ತಿರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ರು. ಐದು ವರ್ಷಗಳ ಕಾಲ ಸರಕಾರವನ್ನು ಯಾರೂ ಅಲ್ಲಾಡಿಸಲಾಗಲ್ಲ ಬಿಜೆಪಿ ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದ ಅವ್ರು ಯಾವ ಸಂದರ್ಭದಲ್ಲಿ ಫೀಲ್ಡ್‌ಗೆ ಇಳಿಸಬೇಕೆಂದು ಬಿಜೆಪಿಯವರ ನಡವಳಿಕೆ ನೋಡಿ ನಿರ್ಧಾರ ಮಾಡುತ್ತೇವೆ.ಕಾಂಗ್ರೆಸ್ -ಜೆಡಿಎಸ್ ಶಾಸಕರು ಯಾರೂ ಅವರ ಸಂಪರ್ಕದಲ್ಲಿಲ್. ಇದ್ದಿದಿದ್ರೆ ಈಗಾಗಲೇ ಶೋ ಮಾಡುತ್ತಿದ್ದರು.ಶೋ ಮಾಡಕ್ಕಾಗದ್ದರಿಂದ ಯಡಿಯೂರಪ್ಪ ತೀರ್ಥ ಯಾತ್ರೆ ಮಾಡ್ತಿದ್ದಾರೆ. ಇನ್ನು ಅನಿವಾರ್ಯತೆ ಇದ್ದರೆ ನಾವು ಶಾಸಕರನ್ನು ಶೋ ಮಾಡಿ ತೋರಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸವಾಲ್ ಹಾಕಿದ್ದಾರೆ.

Related posts

Leave a Reply