Header Ads
Header Ads
Breaking News

ಕುಮಾರಸ್ವಾಮಿ ಪೂರ್ಣಾವಧಿ ಸಿಎಂಗೆ ಪೂರ್ಣ ಸಹಮತ. ಐವನ್ ಡಿಸೋಜ ಹೇಳಿಕೆ

ಕುಮಾರಸ್ವಾಮಿ ಯವರು ಪೂರ್ಣಾವಧಿ ಸಿಎಂ ಆಗಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ಪೂರ್ಣ ಸಹಮತ ಇದೆ ಎಂದು ವಿಧಾನತ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಯಾವುದೇ ಅಸಮಾಧಾನ ಇಲ್ಲ .

ಸಮ್ಮಿಶ್ರ ಸರ್ಕಾರ ದೃಢ ವಾಗಿರಬೇಕು, ನಾಯಕತ್ವ ಗಟ್ಟಿಯಾಗಿರಬೇಕು ಎಂಬ ನೆಲೆಯಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದ್ದು ಹೈಕಮಾಂಡ್ ತೀರ್ಮಾನಕ್ಕೆ ಯಾವುದೇ ಅಸಮಾಧಾನ ಇಲ್ಲ ಎಂದವರು ಹೇಳಿದ್ದಾರೆ.ಇನ್ನು ಶಿಕ್ಷಕರ ಹಾಗೂ ಪದವಿಧರ ಶಿಕ್ಷಕರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಈಗಾಗಲೇ ಶಿಕ್ಷಕರನ್ನು ಭರ್ತಿ ಮಾಡುವ ಕೆಲಸ ಮಾಡಿದೆ. ಅದ್ರೆ ಬಿಜೆಪಿ ಅವಧಿಯಲ್ಲಿ ಯಾವುದೇ ರೀತಿಯಲ್ಲೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ದೂರಿದ್ರು.

Related posts

Leave a Reply