Header Ads
Header Ads
Breaking News

ಕುರ್ನಾಡು:ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ.

ಕುರ್ನಾಡು ಗ್ರಾಮಸ್ಥರು ಹಾಗೂ ಮುಡಿಪಿನಲ್ಲಿ ನೆರೆದ ಸುತ್ತಮುತ್ತಲಿನ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಕಾಶ್ಮೀರದ ಪುಲ್ವಾಮಾ ದಲ್ಲಿ ಪಾಕಿ ಉಗ್ರರಿಂದ ಹತ್ಯೆಗೀಡಾದ ಸೈನಿಕರಿಗೆ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ರಾಮಕೃಷ್ಣ ಶಾಸ್ತ್ರಿ, ಹೂಹಾಕುವಕಲ್ಲು, ಯಂ ಪ್ರಭಾಕರ್ ಮುಡಿಪು, ಮಹಾಲಿಂಗ ಭಟ್ ಕಂಬ್ಳಪದವು ಹಾಗೂ ತಂಬಾಜೆ ಗೋಪಾಲ್ ಮತ್ತು ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಉರಿಯಲ್ಲಿ ಪಾಕಿಸ್ತಾನದ ಉಗ್ರರ ಜೊತೆಗೆ ಮುಖಾಮುಖಿ ಹೋರಾಟದಲ್ಲಿ ಎದೆಗೆ ಗುಂಡೇಟು ತಗಲಿದರೂ ಶೌರ್ಯದಿಂದ ಕಾದಾಡಿದ ಸಂತೋಷ್ ಇವರುಗಳಿಗೆ ಗೌರವಾದರಗಳನ್ನು ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿಯ ಮಂಗಳೂರು ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರು, ಕುರ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಿತಿನ್ ಕುಮಾರ್ ಕೈರಂಗಳ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಮಹೇಶ್ ಚೌಟ, ಜಗದೀಶ್ ಆಳ್ವ ಕೂವೆತ್ತಬೈಲು ಮುಂತಾದವರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ನೆರೆದ ದೇಶಾಭಿಮಾನಿಗಳು ದೇಶಕ್ಕಾಗಿ ಪ್ರಾಣಾರ್ಪಣೆಗೈದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಹಣತೆಗಳ ದೀಪ ಹಚ್ಚಿ ನಮನಗಳನ್ನು ಸಲ್ಲಿಸಿದರು.

Related posts

Leave a Reply

Your email address will not be published. Required fields are marked *