Header Ads
Header Ads
Header Ads
Breaking News

ಕುರ್ನಾಡು ಅಂಗಣೆಮಾರ್ ಪಿದಮಲೆ ಕೂಡುರಸ್ತೆ ಕಾಂಕ್ರಿಟೀಕರಣಗೊಂಡ ನೂತನ ರಸ್ತೆ ಉದ್ಘಾಟನೆ

ಒಂದು ಕಾಲದಲ್ಲಿ ರಿಕ್ಷಾದವರು ಬರಲು ಒಪ್ಪದ ಪ್ರದೇಶದ ಕಾಂಕ್ರೀಟಿಕರಣ ಯುವಜನರ ಹಾಗೂ ಪಂಚಾಯಿತಿ ಸದಸ್ಯರ ಸಹಕಾರದಿಂದ ನೆರವೇರುವ ಮೂಲಕ ದಶಕಗಳ ಜನರ ಬೇಡಿಕೆ ಈಡೇರಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.ಅವರು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಣೆಮಾರ್ ಪಿದಮಲೆ ಕೂಡುರಸ್ತೆಗೆ ಕಾಶಿಹಿತ್ಲು ಎಂಬಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಯವರು ಶಿಲಾನ್ಯಾಸ ನೆರವೇರಿಸಿದ ಎಲ್ಲಾ ಕಾಮಗಾರಿಗಳು ಮುಗಿದಿವೆ. ಪಕ್ಷದ ಮುಖಂಡರು ಮಾತ್ರವಲ್ಲ ಪಂಚಾಯಿತಿ ಸದಸ್ಯರು ಚಾಲನೆ ನೀಡಿರುವ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣವಾಗಿವೆ. ಹಿಂದೆ ಪಕ್ಷದ ಮುಖಂಡರು ತಮ್ಮ ಭೂಮಿಯನ್ನು ಮಾರಿ ರಸ್ತೆ ನಿರ್ಮಿಸಿದ ಇತಿಹಾಸವಿದೆ. 13,14 ನೇ ಹಣಕಾಸು ಮತ್ತು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ರೂ. 3ಲಕ್ಷ ಅನುದಾನದಲ್ಲಿ 69ಮೀ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರೈಸುವ ಮೂಲಕ ಊರಿಗೆ ಕಿರೀಟ ಇಟ್ಟಂತಾಗಿದೆ ಎಂದರು.ಪಂಚಾಯಿತಿ ಸದಸ್ಯ ಶಿವಶಂಕರ್ ಭಟ್ ಮಾತನಾಡಿ ರಸ್ತೆ ನಿರ್ಮಿಸದೇ ಇದ್ದಲ್ಲಿ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಇಂಜಿನಿಯರ್ ಬಳಿ ತಿಳಿಸಿದ್ದೆ. ಅದರಂತೆ ಸರಿಯಾದ ಸಮಯದಲ್ಲಿ ಪಂಚಾಯಿತಿ ಸಹಕಾರದ ಜತೆಗೆ ಕಾಂಕ್ರೀಟಿಕರಣ ಕಾಮಗಾರಿ ನೆರವೇರಿದೆ ಎಂದರು.

ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಟಿ.ಜಿರಾಜಾರಾಂ ಭಟ್, ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ, ಪಂಚಾಯಿತಿ ಸದಸ್ಯರುಗಳಾದ ಶಿವಶಂಕರ್ ಭಟ್, ಬಿ.ಕೆ.ಪುಷ್ಪ, ಗೋಪಾಲ ಬಂಗೇರ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply