Header Ads
Header Ads
Header Ads
Breaking News

ಕುರ್‌ಆನ್‌ಗೆ ಅಗೌರವ ಆಗಿದ್ದಲ್ಲಿ ಉಗ್ರ ಪ್ರತಿಭಟನೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಎಚ್ಚರಿಕೆ

ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಖಲಂದರ್ ಮನೆ ಶೋಧ ನಡೆಸುವ ವೇಳೆ ಪೊಲೀಸರು ಪವಿತ್ರ ಕುರ್‌ಆನ್‌ಗೆ ಅಗೌರವ ತೋರಿದ್ದೇ ಆದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ನೀಡಿದೆ.

ಮಂಗಳೂರಿನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್, ಘಟನೆಗೆ ಸಂಬಂಧಪಟ್ಟಂತೆ ಸೆ. ೮ರಂದು ಪ್ರತಿಭಟನೆಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯು ಪ್ರತಿಕ್ರಿಯೆ ನೀಡಿದ್ದು, ಕುರ್‌ಆನಿಗೆ ಯಾವುದೇ ಅಗೌರವ ಮಾಡಿಲ್ಲ. ಅರೋಪಿಯ ಮನೆ ಶೋಧದ ಎಲ್ಲಾ ವೀಡಿಯೋಗಳು ನಮ್ಮಲ್ಲಿ ಇದೆ ಎಂದು ಹೇಳಿದ್ದಾರೆ.

ಆದರೆ ಈ ವಿಡಿಯೋವನ್ನು ಮನೆವರ ಸಮ್ಮುಖದಲ್ಲಿ ನಮಗೆ ತೋರಿಸಬೇಕಾಗಿದ್ದು, ಕುರ್‌ಆನಿಗೆ ಅಗೌರವ ಆಗಿಲ್ಲ ಎಂಬುದು ಸ್ಪಷ್ಟಗೊಂಡರೆ ಪ್ರತಿಭಟನೆಯನ್ನು ಹಿಂಪಡೆಯಲಾಗುದು ಎಂದವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಶ್ರಫ್ ಕಿನಾರಾ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಹಮೀದ್ ಕುದ್ರೋಳಿ, ಮೊಹಮ್ಮದ್ ಹನೀಫ್ ಯು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply