Header Ads
Header Ads
Breaking News

ಕುಲಶೇಖರ ಸರಿಪಳ್ಳ ಮೇಲ್ತೋಟ ರಸ್ತೆ ಕಾಮಗಾರಿ ಶಾಸಕ ಜೆ.ಆರ್ ಲೋಬೋ ಶಿಲಾನ್ಯಾಸ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ಸರಿಪಳ್ಳ ಮೇಲ್‌ತೋಟ ರಸ್ತೆ ಅಭಿವೃದ್ಧಿಗೆ ಶಾಸಕ ಜೆ.ಆರ್ ಲೋಬೋ ಶಿಲಾನ್ಯಾಸ ನೆರವೇರಿಸಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡು ನಂಬರ್ 36 ಹಾಗೂ 51ರ ಕುಲಶೇಖರ ಸರಿಪಳ್ಳ ಮೇಲ್ತೋಟ ರಸ್ತೆ ಅಭಿವೃದ್ಧಿಗೆ ೮೫ ಲಕ್ಷ ರೂಪಾಯಿ ಅನುದಾನ ಮೀಸಲಿರಿಸಿದ್ದು, ಶಾಸಕ ಜೆ.ಆರ್ ಲೋಬೋ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, 40 ವರ್ಷಗಳಿಂದ ಈ ರಸ್ತೆ ಅಬಿವೃದ್ಧಿಯನ್ನು ಕಾಣದೆ ಸಂಪೂಣ್ ಹದಗೆಟ್ಟು ಹೋಗಿತ್ತು. ಇದೀಗ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ರಸ್ತೆ ಕಾಮಗಾರಿ ಮಾಡಲಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಇಲ್ಲಿನ ಜನತೆಗೆ ಉಪಯೋಗಕ್ಕೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಪಾಲಿಕೆ ಮೇಯರ ಕವಿತಾ ಸನಿಲ್, ಪಾಲಿಕೆ ಸದಸ್ಯರಾದ ಶಶಿಧರ್ ಹೆಗ್ಡೆ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply