Header Ads
Header Ads
Breaking News

ಕುಲಾಲ-ಕುಂಬಾರರ ಸಮಾವೇಶ ಮತ್ತು ಹಕ್ಕೊತ್ತಾಯ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶ

ಬೆಳ್ತಂಗಡಿ ತಾಲೂಕು ಕುಲಾಲ-ಕುಂಬಾರರ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಹಾಗೂ ಹಕ್ಕೊತ್ತಾಯ ಜಾಥ ಯಶಸ್ವಿಯಾಗಿ ನೆರವೇರಿತು.

ಬೆಳ್ತಂಗಡಿಯ ಅಯ್ಯಪ್ಪಗುಡಿಯ ಮುಂಭಾಗದಿಂದ ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆದ ಜಾಥವು ತಾಲೂಕು ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು. ನಂತರ ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರು ಸಮಾವೇಶವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದರು. ನಂತರ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಧ್ಯಕ್ಷರಾದ ಡಾ||ಅಣ್ಣಯ್ಯ ಕುಲಾಲ್ ಹಕ್ಕೊತ್ತಾಯ ಮಂಡಿಸಿದರು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ, ಶಾಸಕರಾದ ವಸಂತ ಬಂಗೇರ, ದ.ಕ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಹರೀಶ್ ಪೂಂಜ ಮತ್ತು ರಾಜ್ಯಸಭಾ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಅಭಿಷೇಕ್ ಬೆಳ್ತಂಗಡಿ

Related posts

Leave a Reply